ಅವ್ಯಯಗಳು

ಛಂದಸ್ಸು ಎಂದರೇನು?

ಪದ್ಯ ರಚನಾ ವಿನ್ಯಾಸವನ್ನು ತಿಳಿಸುವ ಶಾಸ್ತ್ರವನ್ನು ʼಛಂದಸ್ಸುʼ ಎನ್ನುತ್ತೇವೆ. ಛಂದಸ್ಸಿನ ಶಾಸ್ತ್ರದ ಪ್ರಕಾರ ರಚಿತವಾದ ಪದ್ಯವನ್ನು ʼಛಂದೋಬದ್ಧ ಪದ್ಯʼ ಎನ್ನುವರು.

ಕನ್ನಡ ಛಂದೋಗ್ರಂಥಗಳಲ್ಲಿ ಮೊದಲನೆ ಸಮಗ್ರ ಸ್ವತಂತ್ರ ಕೃತಿಯಾದ ‘ಛಂದೋಂಬುದಿ’ ಯನ್ನು ಕ್ರಿ.ಶ ಸು 990ರಲ್ಲಿ 1ನೆಯ ನಾಗವರ್ಮನು ರಚಿಸಿದನು. ಈ ಗ್ರಂಥದಲ್ಲಿ ಸಂಸ್ಕೃತ, ಪ್ರಾಕೃತ ಹಾಗೂ ಕನ್ನಡ ಛಂದಸ್ಸಿನ ಬಗ್ಗೆ ಹೇಳಲಾಗಿದೆ.

ಛಂದಸ್ಸಿನಲ್ಲಿರುವ ಪ್ರಮುಖ 4 ನಿಯಮಗಳು:-

(1) ಪಾದ
(2) ಪ್ರಾಸ
(3) ಯತಿ
(4) ಗಣ

ಛಂದಸ್ಸಿನ ನಿಯಮಗಳ ವಿವರಣೆ: 

(1) ಪಾದ: 

ಛಂದಸ್ಸಿನ ನಿಯಮಕ್ಕೆ ಅನುಸಾರವಾಗಿ ಕಾವ್ಯ ರಚಿಸುವಾಗ ಬರೆಯುವ ಪ್ರತಿಯೊಂದು ಪದ್ಯದ ಸಾಲನ್ನು ‘ಪಾದ’ ಎಂದು ಕರೆಯುತ್ತೇವೆ.
ಎರಡು ಸಾಲಿನ ಪದ್ಯವನ್ನು ದ್ವಿಪದಿ ಎನ್ನುವರು.
ಮೂರು ಸಾಲಿನ ಪದ್ಯವನ್ನು ತ್ರಿಪದಿ ಎನ್ನುವರು.
ನಾಲ್ಕು ಸಾಲಿನ ಪದ್ಯವನ್ನು ಚೌಪದಿ ಎನ್ನುವರು.
ಆರು ಸಾಲಿನ ಪದ್ಯವನ್ನು ಷಟ್ಪದಿ ಎನ್ನುವರು.

(2) ಪ್ರಾಸ:

ಪದ್ಯದ ಪ್ರತಿ ಪಾದದ ಆದಿಯಲ್ಲಿ ಅಥವಾ ಮಧ್ಯದಲ್ಲಿ ಅಥವಾ ಅಂತ್ಯದಲ್ಲಿ ಒಂದು ನಿರ್ದಿಷ್ಟ ವ್ಯಂಜನವು ನಿಯಮಿತವಾಗಿ ಪುನರಾವರ್ತನೆಯಾಗಿ ಬಂದರೆ ಅದನ್ನು ‘ಪ್ರಾಸ’ ಎನ್ನುತ್ತೇವೆ.

ಪ್ರಾಸವನ್ನು ಕುರಿತು ಮೊದಲು ಪ್ರಸ್ತಾಪಿಸಿದವರು ಕವಿರಾಜಮಾರ್ಗಕಾರ. ’ಪ್ರಾಸ’ ಇದು ಸಂಸ್ಕೃತ ಪದ. ಪ್ರಾಸ ಎಂಬ ಪದ ಸಂಸ್ಕೃತ ಭಾಷೆಯಿಂದ ಬಂದಿದೆ. ಆದರೆ ಸಂಸ್ಕೃತದಲ್ಲಿ ಪ್ರಾಸದ ಬಳಕೆ ಇಲ್ಲ. ಪ್ರಾಕೃತದಲ್ಲಿ ಅಂತ್ಯ ಪ್ರಾಸವಿದೆ. ‘ಪ್ರ’ ಪ್ರಕರ್ಷವಾದ ‘ಆಸ’ ಪ್ರಾಸ ಎಂದು ಅರ್ಥೈಸಲಾಗಿದೆ.

ಕವಿರಾಜಮಾರ್ಗಕಾರ ದ್ವಿತೀಯಾಕ್ಷರ ಪ್ರಾಸದ ಬಗ್ಗೆ ವಿವರಿಸಿದ್ದಾನೆ. ಪ್ರತಿ ಪದ್ಯದ ಎರಡನೇ ಅಕ್ಷರ ಒಂದೇ ವಿಧವಾಗಿರುವುದನ್ನು ’ಪ್ರಾಸ’ ಎನ್ನಲಾಗಿದೆ.
ಪ್ರಾಸಗಳಲ್ಲಿ ಅನೇಕ ಬಗೆಗಳನ್ನು ಗುರುತಿಸಲಾಗಿದೆ.

ಕವಿರಾಜ ಮಾರ್ಗಕಾರ “ಅತಿಶಯಮ್ ಕನ್ನಡಕ್ಕೆ ಸತತ ಪ್ರಾಸಂಗಳ್” ಎಂದು ಹೇಳಿ ಶಾಂತಪ್ರಾಸ, ವರ್ಗಪ್ರಾಸ, ಸಮೀಪಪ್ರಾಸ, ಅನುಗತ ಪ್ರಾಸ, ಅನಗತ ಪ್ರಾಸ, ಅಂತರ್ಗತಪ್ರಾಸ ಎಂಬ ಆರು ಬಗೆಯನ್ನು ಹೇಳಲಾಗಿದೆ. ಇಂಗ್ಲೀಷಿನ Rhyme ಎಂಬ ಪದವನ್ನು ಪ್ರಾಸಕ್ಕೆ ಸಂವಾದಿಯಾಗಿ ಬಳಸಲಾಗುತ್ತದೆ.

ನಾಗವರ್ಮ ತನ್ನ ಛಂಧೋಬುಧಿಯಲ್ಲಿ
“ನಿಜದಿಂ ಒಂದೊಡೆ ಸಿಂಗಂ
ಗಜದೀರ್ಘಂ, ಬಿಂದು ವೃಷಭ, ವ್ಯಂಜನ ಶರಭಂ
ಅಜನು ವಿಸರ್ಗಂ, ಹಯನು
ಬುಝಮುಖಿ ದೊಡ್ಡಕ್ಕರಂಗಳಿವು ಷಟ್ ಪ್ರಾಸಂ//
ಎಂಬ ಆರು ಪ್ರಾಸಗಳನ್ನು ಹೇಳಿದ್ದಾನೆ.

ಛಂದಸ್ಸು ಎಂದರೇನು?

ಪದ್ಯ ರಚನಾ ವಿನ್ಯಾಸವನ್ನು ತಿಳಿಸುವ ಶಾಸ್ತ್ರವನ್ನು ʼಛಂದಸ್ಸುʼ ಎನ್ನುತ್ತೇವೆ. ಛಂದಸ್ಸಿನ ಶಾಸ್ತ್ರದ ಪ್ರಕಾರ ರಚಿತವಾದ ಪದ್ಯವನ್ನು ʼಛಂದೋಬದ್ಧ ಪದ್ಯʼ ಎನ್ನುವರು.

ಪ್ರಾಸದಲ್ಲಿ 3 ವಿಧಗಳಿವೆ.
1) ಆದಿಪ್ರಾಸ
2) ಮಧ್ಯಪ್ರಾಸ
3) ಅಂತ್ಯಪ್ರಾಸ

1) ಆದಿಪ್ರಾಸ:

ಪದ್ಯದ ಪ್ರತಿ ಪಾದದ ಮೊದಲೆರಡು ಸ್ವರಗಳ ನಡುವೆ ಒಂದು ನಿರ್ದಿಷ್ಟ ವ್ಯಂಜನವು ನಿಯತವಾಗಿ ಪುನರಾವರ್ತನೆಯಾಗಿ ಬಂದರೆ ಅದನ್ನು ಆದಿಪ್ರಾಸ ಎಂದು ಕರೆಯುತ್ತೇವೆ. ಇದನ್ನು ಬಂಡ ಪ್ರಾಸ ಎಂತಲೂ ಕರೆಯುತ್ತಾರೆ.
ಉದಾಹರಣೆ :-
ಸ್ಮಿತವಿರಲಿ ವದನದಲಿ, ಕಿವಿಗೆ ಕೇಳಿಸದಿರಲಿ/
ಹಿತವಿರಲಿ ವಚನದಲಿ, ಋತವ ಬಿಡದಿರಲಿ/
ಮಿತವಿರಲಿ ಮನಸಿನುದ್ವೇಗದಲಿ, ಭೋಗದಲಿ/
ಅತಿಬೇಡವೆಲ್ಲಿಂಯುಂ– ಮಂಕುತಿಮ್ಮ//

ಪುರದ ಪುಣ್ಯಂ ಪುರುಷ ರೂಪಿಂದೆ ಪೊಗುತಿದೆ.
ಪರಿ ಜನರ ಭಾಗ್ಯ ಅಡವಿಗೆ

ಆದಿಪ್ರಾಸದಲ್ಲಿ ಆರು ವಿಧಗಳಿವೆ.
(1) ಸಿಂಹಪ್ರಾಸ: ಪ್ರಾಸಾಕ್ಷರದ ಹಿಂದಿನ ಸ್ವರವು ಹ್ರಸ್ವವಾಗಿದ್ದರೆ ಅದು ಸಿಂಹಪ್ರಾಸ.
ಕುರಿ, ಹರ, ಗುರು, ಜರಿ, ಕರೆ

ಉದಾ: ಕೆಲವಂ ಬಲ್ಲವರಿಂದ ಕಲ್ತು
ಕೆಲವಂ ಶಾಸ್ತ್ರಗಳಿಂದ ಕಲ್ತು
ಕೆಲವಂ ಮಾಳ್ವ……

(2) ಗಜಪ್ರಾಸ: ಪ್ರಾಸಾಕ್ಷರದ ಹಿಂದಿನ ಸ್ವರವು ದೀರ್ಘವಾಗಿದ್ದರೆ ಅದು ಗಜಪ್ರಾಸ.
ಕಾಡು, ನೋಡಿ, ನಾಡು, ಕೂಡ
ಉದಾ:
ಈಶನ ಕರುಣೆಯ
ನಾಶಿಸು ವಿನಯದಿ
ಸಾನ ಹಾಗೆಯೇ ನೀ ಮನವೇ

(3) ಹಯಪ್ರಾಸ/ ಅಶ್ವ ಪ್ರಾಸ: ಒಂದೇ ಜಾತಿಯ ಎರಡು ವ್ಯಂಜನಗಳು ಪ್ರಾಸಾಕ್ಷರಗಳಾಗಿದ್ದರೆ, ಅದು ಹಯಪ್ರಾಸ.
ಪೊನ್ನ, ನಿನ್ನ, ಸನ್ನೆ | ಅಕ್ಕ, ಪಕ್ಕ, ಹೊಕ್ಕಿ, ನಕ್ಕ

ಉದಾ:’
ನಿನ್ನನೆ ನಚ್ಚಿದಂ ಕುರುದುಹೀಪತಿ ನಿನ್ನ ಶರಾಳಿಗಳ್ಗೆ ಮು
ನ್ನಡುಗುತ್ತು ಮಿರ್ಪು ದರಿಸಾಧನೆ ಸಂಪದಮಂತೆ ಶಸ್ತ್ರಸಂ//

(4) ಶರಭಪ್ರಾಸ: ಬೇರೆ ಬೇರೆ ಜಾತಿಯ ಎರಡು/ಮೂರು ವ್ಯಂಜನಗಳು ಪ್ರಾಸಾಕ್ಷರಗಳಾಗಿದ್ದರೆ ಅದು ಶರಭಪ್ರಾಸ.
ಗದ್ಯ, ಪದ್ಯ, ಮಧ್ಯ

ಪ್ರತಿಪಾದದ ಮೊದಲೆರಡು ಸ್ವರಗಳ ನಡುವೆ ಒಂದೇ ವಿಧಾವಾದ ವಿಜಾತೀಯ ಸಂಯುಕ್ತ ವ್ಯಂಜನಗಳು ಬಂದು ಅವುಗಳ ಹಿಂದೆ ಅನುಸ್ವರ, ವಿಸರ್ಗಗಳಾಗಲಿ ಇಲ್ಲದಿದ್ದರೆ ಅದೇ ಶರಭ ಪ್ರಾಸವಾಗುತ್ತದೆ.
ಉದಾ:
ಅಕ್ಷಣದೊಳ್ ಪರಸ್ಪರ
ಕ್ಷೇಕ್ಷಣರಾತ್ಮ ಶಕ್ತಿಗೆ ಶರೀರ

ಮೂರು ವ್ಯಂಜನಗಳ ಸಂಯೋಗಕ್ಕೆ ಉದಾ:
ಇನ್ನಂಬೊಲ್ ವಿಭವಯುತಂ
ಚನ್ನಂಬೊಲ್ ಕಾಂತಿವಂತ

(5) ವೃಷಭಪ್ರಾಸ: ಪ್ರಾಸಾಕ್ಷರದ ಹಿಂದೆ ಅನುಸ್ವಾರವಿದ್ದರೆ ಅದು ವೃಷಭಪ್ರಾಸ.
ಹಿಂದೆ, ಮುಂದೆ, ಸಂಧಿ, ಎಂದೆ
ಉದಾ:
ಕಂಸವಧಂಗೆಯ್ದು ಮುರ
ದ್ವಂಸಿಗೆ ಪೂಜಾರ್ಥಮೆದಂಊ ಮಾರುತ ಕೊಟ್ಟೆಂ //

(6) ಅಜಪ್ರಾಸ: ಪ್ರಾಸಾಕ್ಷರದ ಹಿಂದೆ ವಿಸರ್ಗವಿದ್ದರೆ ಅದು ಅಜಪ್ರಾಸ.
ದುಖಃ, ಅಂತಃ, ಪುನಃ, ಮನಃ

ಉದಾ:
ಆ: ಪ್ರಥಮ ನನುವೆದಿಂತಯ
ಶ: ಪ್ರಾರ್ಥನೆಯಿಂದೆ ಗೆಯ್ಯುದುಚಿತಮ ನಿನಗಂ//

ಪ್ರಾಸದ ಬಗ್ಗೆ ಕವಿಮಹಾಶಯರ ನುಡಿಗಳು

  • ಶ್ರೀವಿಜಯನು- ‘ಪೂರ್ವಾಚಾರ್ಯರು ದೇಶಿಮನಿಸಿ, ಕಂಡ ಪ್ರಾಸಮನ್ , ಅತಿಶಮವಿವೆಂದರ್…ಕನ್ನಡಕ್ಕೆ ಸತತ ಪ್ರಾಸಂ” ಎಂದು ಪ್ರಾಸದ ಮಹತ್ವ ಹೇಳಿದ್ದಾರೆ.
  • ಸರ್ವಜ್ಞ ಪ್ರಾಸದ ಮಹತ್ವವನ್ನು ಕುರಿತು – ‘ಸಾಸಿವೆ ಎಣ್ಣೆಯ ಹದಮಾಡಿ ಕಣ್ಣಿಗೆ ,ಪೋಸಿ ಕೊಂಡಂತೆ ಸರ್ವಜ್ಞ//. ಎಂದಿದ್ದಾನೆ.
  • ದ.ರಾ.ಬೇಂದ್ರೆಯವರು ಕಾವ್ಯದೇವಿಯ ನಾಟ್ಯರಂಗದ ವಿಲಾಸದ ಗುರುತುಗಳನ್ನು ತಿಳಿಯಲು ಪ್ರಾಸವೇ ಗುರುತು” ಎಂದಿದ್ದಾರೆ.

2) ಮಧ್ಯ ಪ್ರಾಸ (ಒಳಪ್ರಾಸ):

ಪದ್ಯದ ಪ್ರತಿ ಪಾದದ ಮೊದಲೆರಡು ಸ್ವರಗಳ ನಡುವೆ ಬಂದ ನಿರ್ದಿಷ್ಟ ವ್ಯಂಜನವು ಅದೇ ಪಾದದ ಮಧ್ಯ ಭಾಗದಲ್ಲಿ
ನಿಯತವಾಗಿ ಪುನರಾವರ್ತನೆಯಾಗಿ ಬಂದರೆ ಅದನ್ನು ‘ಮಧ್ಯ ಪ್ರಾಸ’ (ಒಳಪ್ರಾಸ) ಎನ್ನುವರು. ಮಧ್ಯಪ್ರಾಸ ತ್ರಿಪದಿಯಲ್ಲಿ ಬಳಕೆ ಹೆಚ್ಚು.

ಉದಾಹರಣೆ:
ಸಾಧುಗೆ ಸಾಧು ಮಾಧುರ್ಯನ್ಗೆ ಮಾಧುರ್ಯಂ
ಬಾಧಿಪ್ಪ ಕಲಿಗೆ ಕಲಿಯುಗ/ ವಿಪರೀತನ್‌/
ಮಾಧವನೀತನ್‌ ಪೆರನಲ್ಲ//

3) ಅಂತ್ಯ ಪ್ರಾಸ:
ಪದ್ಯದ ಪ್ರತಿ ಪಾದದ ಕೊನೆಯ ಎರಡು ಅಕ್ಷರಗಳು ಒಂದು ನಿರ್ದಿಷ್ಟ ವ್ಯಂಜನ ಸಹಿತ ಸ್ವರದಿಂದ ಕೂಡಿ
ಪುನರಾವರ್ತನೆಯಾಗಿ ಬಂದರೆ ಅದನ್ನು ‘ಅಂತ್ಯ ಪ್ರಾಸ’ ಎನ್ನುವರು.
ಉದಾಹರಣೆ:
ಆಡುವ ಗಂಡಯ್ಯನ ಹೊ ನೃತ್ಯಂ
ನೋಡುವ ಶವನಂ ಮುಟ್ಟಿತು ಸತ್ಯಂ

“ತುಂಬಿ ವಿಂಡಿಯಂತೆ ಪಾಡಿ
ಜಕ್ಕ ವಕ್ಕಿಯಂತೆ ಕೂಡಿ”

ಪ್ರಾಸದ ಅನುಕೂಲಗಳು
 ಸರ್ವಜ್ಞ ಪ್ರಾಸದ ಮಹತ್ವವನ್ನು ಕುರಿತು – ‘ಸಾಸಿವೆ ಎಣ್ಣೆಯ ಹದಮಾಡಿ ಕಣ್ಣಿಗೆ, ಪೋಸಿ ಕೊಂಡಂತೆ ಸರ್ವಜ್ಞ//. ಎಂದಿದ್ದಾನೆ.
 ಶ್ರೀವಿಜಯನು- ‘ಪೂರ್ವಾಚಾರ್ಯರು ದೇಶಿಮನಿಸಿ, ಕಂಡ ಪ್ರಾಸಮನ್ , ಅತಿಶಮವಿವೆಂದರ್… ಕನ್ನಡಕ್ಕೆ ಸತತ ಪ್ರಾಸಂ” ಎಂದು ಪ್ರಾಸದ ಮಹತ್ವ ಹೇಳಿದ್ದಾರೆ.
 ದ.ರಾ.ಬೇಂದ್ರೆಯವರು ಕಾವ್ಯದೇವಿಯ ನಾಟ್ಯರಂಗದ ವಿಲಾಸದ ಗುರುತುಗಳನ್ನು ತಿಳಿಯಲು ಪ್ರಾಸವೇ ಗುರುತು” ಎಂದಿದ್ದಾರೆ.

(3) ಯತಿ:

ಎಂದರೆ ನಿಲುಗಡೆಯ ಸ್ಥಾನ.
ಕಾವ್ಯವನ್ನು ವಾಚಿಸುವಾಗ ಅರ್ಥಕ್ಕೆ ಅಡ್ಡಿಯಾಗದಂತೆ ಉಸಿರು ತೆಗೆದುಕೊಳ್ಳಲು ನಿಲ್ಲಿಸುವ ತಾಣಕ್ಕೆ ಯತಿ ಎನ್ನುವರು.

ಒಂದು ಪದ್ಯವನ್ನು ಓದುವಾಗ ಒಂದು ನಿಯತವಾದ ಸ್ಥಾನದಲ್ಲಿ, ಓದುವಿಕೆಯ ಸುಭಗತೆಗೆ ಭಂಗ ಬರದ ಹಾಗೆ, ಉಸುರೆಳೆದುಕೊಳ್ಳಲು ಅಲ್ಲಲ್ಲಿ ನಿಲ್ಲಿಸಲಾಗುತ್ತದೆ. ಇಂತಹ ವಿಶ್ರಾಂತ ಸ್ಥಾನವೇ ’ಯತಿ’.
ಕನ್ನಡದಲ್ಲಿ ಪ್ರಾಸಕ್ಕೆ ಹೆಚ್ಚು ಮಹತ್ವ ಕೊಟ್ಟಿರುವುದರಿಂದ ಕೆಲವೊಂದು ಕಡೆ ಕವಿಗಳು ’ಯತಿ ವಿಲಂಘನೆ’ ಮಾಡಿದಂತೆ ಕಾಣುತ್ತದೆ. ಆದರೆ ’ಯತಿ’ಯ ಮಹತ್ವವನ್ನು ತಿಳಿದ ಮೇಲೆಯೂ ’ಯತಿ’ಯನ್ನು ಬಿಡುವ ವಿಚಾರವನ್ನು ವಿದ್ವಾಂಸರು ಮಾಡಿದ್ದಾರೆ. ಏಕೆಂದರೆ, ಅರ್ಥಕ್ಕೆ ಭಂಗ ಬರುವುದೆಂಬ ಕಾರಣಕ್ಕೆ ಕೆಲವು ಕಡೆ ’ಯತಿ’ಯನ್ನು ಬಿಡಲಾಗಿದೆ.

(4) ಗಣ:

ಗಣ ಎಂದರೆ ಗುಂಪು. ಛಂದಸ್ಸಿನಲ್ಲಿ ಪದ್ಯದ ಪ್ರತಿಪಾದಕ್ಕೆ ಪ್ರಸ್ತಾರ ಹಾಕಿ, ನಿರ್ದಿಷ್ಟ ಸಂಖ್ಯೆಗೆ ಅನುಗುಣವಾಗಿ ಅಕ್ಷರಗಣ ಅಥವಾ ಮಾತ್ರೆಗಳ ಅಥವಾ ಅಂಶಗಳ ಆಧಾರದ ಮೇಲೆ ಮಾಡಿದ ಗುಂಪನ್ನು ‘ಗಣ’ ಎನ್ನುವರು.

ಛಂದಸ್ಸಿನಲ್ಲಿ ಮೂರು ವಿಧದ ಗಣಗಳಿವೆ.
೧. ಅಕ್ಷರ ಗಣ
೨. ಮಾತ್ರಾ ಗಣ
೩. ಅಂಶ ಗಣ

ಪ್ರಸ್ತಾರ: ಛಂದಸ್ಸಿನಲ್ಲಿ ಪದ್ಯದ ಪ್ರತಿಪಾದದಲ್ಲಿರುವ ಅಕ್ಷರಗಳಿಗೆ ಲಘು ಅಥವಾ ಗುರು ಚಿಹ್ನೆಯನ್ನು ಹಾಕಿ ಗುರುತಿಸುವ ಕ್ರಿಯೆಯನ್ನು ‘ಪ್ರಸ್ತಾರ’ ಎನ್ನುವರು.
ಮಾತ್ರೆ: ಕನ್ನಡ ವರ್ಣಮಾಲೆಯಲ್ಲಿ ಬರುವ ‘ಅ’ ಎಂಬ ಅಕ್ಷರವನ್ನು ನಾವು ಎಳೆಯದಂತೆ, ಮೊಟಕುಗೊಳಿಸದಂತೆ ಉಚ್ಚಾರ ಮಾಡುವುದಕ್ಕೆ ಬೇಕಾಗುವ ಕಾಲ ಅಥವಾ ಅದಕ್ಕೆ ಬೇಕಾಗುವ ಉಸಿರಿನ ಕಾಲವೇ ಒಂದು ಮಾತ್ರಾ ಕಾಲ. ಒಂದು ಮಾತ್ರಾಕಾಲದಲ್ಲಿ ಉಚ್ಚಾರ ಮಾಡಲಾಗುವ ಅಕ್ಷರಗಳೆಲ್ಲ ಲಘುಗಳೆನಿಸುವುವು. ಲಘುವನ್ನು ‘U’ ಹೀಗೆ ಗುರುತಿಸಲಾಗುವುದು.
ಲಘು (U): ಒಂದು ಮಾತ್ರಾ ಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳನ್ನು ‘ಲಘು’ ಎನ್ನುವರು. ಹ್ರಸ್ವ ಸ್ವರಾಕ್ಷರವನ್ನು ಅಥವಾ ಹ್ರಸ್ವ ಸ್ವರದಿಂದ ಕೂಡಿದ ವ್ಯಂಜನಾಕ್ಷರವನ್ನು ಲಘು ಚಿಹ್ನೆಯಿಂದ ಗುರುತಿಸಲಾಗುತ್ತದೆ.

ಹ್ರಸ್ವ ಸ್ವರಾಕ್ಷರಗಳು
UUUUUU
ಹ್ರಸ್ವ ಸ್ವರದಿಂದ ಕೂಡಿದ ವ್ಯಂಜನಾಕ್ಷರಗಳು
UUUUUU
ಕಿಕುಕೃಕೆಕೊ

 ಗುರು (-): ಎರಡು ಮಾತ್ರಾ ಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರವಗಳನ್ನು ‘ಗುರು’ ಎನ್ನುವರು.

ದೀರ್ಘ ಸ್ವರಾಕ್ಷರಗಳು ಅಥವಾ ದೀರ್ಘ ಸ್ವರದಿಂದ ಕೂಡಿದಡಿದ ವ್ಯಂಜನಾಕ್ಷರಗಳು, ಅನುಸ್ವಾರ, ವಿಸರ್ಗ, ಒತ್ತಕ್ಷರದ ಹಿಂದಿನ ಅಕ್ಷರ & ವ್ಯಂಜನಾಕ್ಷರದ ಹಿಂದಿನ ಅಕ್ಷರವು ಗುರು ‘ ─ ’ ಚಿಹ್ನೆಯಿಂದ ಗುರುತಿಸಲಾಗುತ್ತದೆ.

1)   ದೀರ್ಘ ಸ್ವರಾಕ್ಷರಗಳು
­      
ದೀರ್ಘ ಸ್ವರದಿಂದ ಕೂಡಿದ ವ್ಯಂಜನಾಕ್ಷರಗಳು
­      
ಕಾಕೀಕೂಕೇಕೈಕೋಕೌ
ಅನುಸ್ವಾರ, ವಿಸರ್ಗಗಳಿಂದ ಕೂಡಿದ ಅಕ್ಷರಗಳು
­      
ಅಂಅಃಸಂಸಃಹಂಹಂಬಂ
ವ್ಯಂಜನಾಕ್ಷರದ ಹಿಂದಿನ ಅಕ್ಷರ
­      
ಅಂಅಃಸಂಸಃಹಂಹಂಬಂ

ಲಘು, ಗುರು ಗುರುತಿಸುವಾಗ ಪಾಲಿಬೇಕಾದ ಕೆಲವು ಅತಿ ಮುಖ್ಯ ನಿಯಮಗಳು

  • ಸಂಯುಕ್ತಾಕ್ಷರದ (ಒತ್ತಕ್ಷರದ) ಹಿಂದಿನ ಅಕ್ಷರವನ್ನು ಗುರು ಚಿಹ್ನೆಯಿಂದ ಗುರುತಿಸಲಾಗುತ್ತದೆ. ವಿಕಲ್ಪವಾಗಿ ಶಿಥಿಲದ್ವಿತ್ವವುಳ್ಳ ಪದ ಅಥವಾ ಪದದ ಆದಿಯಲ್ಲಿ ಬರುವ ಸಂಯುಕ್ತಾಕ್ಷರದ ಹಿಂದಿನ ಅಕ್ಷರವನ್ನು ಗುರು ಚಿಹ್ನೆಯಿಂದ ಗುರುತಿಸಲಾಗುವುದಿಲ್ಲ.
    U   U   U   U
ಮ್ಮಕೆನ್ನೆಸೂರ್ಯಕ್ಷೆ
  • ಅನುಸ್ವಾರ / ವಿಸರ್ಗದಿಂದ ಕುಡಿದ ಅಕ್ಷರಗಳನ್ನು ಗುರು ಚಿಹ್ನೆಯಿಂದ ಗುರುತಿಸಲಾಗುತ್ತದೆ.
ಚಂದಿರಕಾಂದುಃಪುನಃ
  • ಅರ್ಧಾಕ್ಷರದಿಂದ ಕುಡಿದ ಅಕ್ಷರಗಳನ್ನು ಗುರು ಚಿಹ್ನೆಯಿಂದ ಗುರುತಿಸಲಾಗುತ್ತದೆ.
ರುಳ್‌ಬೆಳ್ಮುಗಿಲ್‌ತಣ್ಗದಿರ್‌ಚೆಂಬೊನ್‌
  • ಷಟ್ಪದಿಯ ಮೂರನೇ ಮತ್ತು ಆರನೇ ಪಾದದ ಕೊನೆಯ ಅಕ್ಷರವು ಹ್ರಸ್ವ ಸ್ವರಾಕ್ಷರ ಅಥವಾ ಹ್ರಸ್ವ ಸ್ವರದಿಂದ ಕೂಡಿದ ವ್ಯಂಜನಾಕ್ಷರವಾಗಿದ್ದರೂ ಗುರು ಚಿಹ್ನೆಯಿಂದ ಗುರುತಿಸಬೇಕು.
  1. ಅಕ್ಷರ ಗಣ: ಪದ್ಯದ ಪ್ರತಿಪಾದದಲ್ಲಿರುವ ಅಕ್ಷರಗಳನ್ನು ಮೂರು ಮೂರು ಅಕ್ಷರಗಳ ಒಂದೊಂದು ಗುಂಪಾಗಿ ವಿಂಗಡಿಸುವುದನ್ನು ‘ಅಕ್ಷರ ಗಣ’ ಎನ್ನುತ್ತೇವೆ.

 

ಅಕ್ಷರ ಗಣದಲ್ಲಿ ಒಟ್ಟು 8 ವಿಧದ ಗಣಗಳಿವೆ.

ಈ ೮ ಗಣಗಳನ್ನು ಸುಲಭವಾಗಿ ನೆನಪಿಡಲು ಈ ಸೂತ್ರ:

ಸೂತ್ರ:“ಯಮಾತಾರಾಜಭಾನಸಲಗಂ”

೧. ಯಗಣ = ಯಮಾತಾ = U ─ ─

೨. ಮಗಣ = ಮಾತಾರಾ = ─ ─ ─

೩. ತಗಣ = ತಾರಾಜ = ─ ─ U

೪. ರಗಣ = ರಾಜಭಾ = ─ U ─

೫. ಜಗಣ = ಜಭಾನ = U ─ U

೬. ಭಗಣ = ಭಾನಸ = ─ U U

೭. ನಗಣ = ನಸಲ = U U U

೮. ಸಗಣ = ಸಲಗಂ = U U ─

ಲ = ಲಘು = U,

ಗಂ = ಗುರು = ─

ಗಣಗಳನ್ನು ಗುರುತಿಸಲು ಈ ಅಂಶಗಳನ್ನು ಕಲಿಯಿರಿ.

ಗುರು ಮೂರಿರೆ ಮಗಣ
ಲಘು ಮೂರಿರೆ ನಗಣU U U
ಗುರು ಮೊದಲಲ್ಲಿ ಬರಲು ಭಗಣ─ U U
ಲಘು ಮೊದಲಲ್ಲಿ ಬರಲು ಯಗಣU ─ ─
ಗುರು ನಡುವಿರೆ ಜಗಣU ─ U
ಲಘು ನಡುವಿರೆ ರಗಣ─ U ─
ಗುರು ಕೊನೆಯಲ್ಲಿ ಬರಲು ಸಗಣU U ─
ಲಘು ಕೊನೆಯಲ್ಲಿ ಬರಲು ತಗಣ─ ─ U

ಮಾತ್ರಾ ಗಣ

ಮಾತ್ರೆಗಳ ಲೆಕ್ಕಾಚಾರದೊಂದಿಗೆ ವಿಭಾಗಿಸಲ್ಪಡುವ ಗಣವನ್ನು ಮಾತ್ರಾಗಣ ಎನ್ನುವರು.

ಅಂಶಗಣ

ಅಂಶಗಳ ಆಧಾರದಿಂದ ವಿಭಾಗಿಸಲ್ಪಡುವ ಗಣವನ್ನು ಅಂಶಗಣ ಎನ್ನುವರು. ಅಂಶಗಣದಲ್ಲಿ ಬ್ರಹ್ಮ, ವಿಷ್ಣು ಮತ್ತು ಶಿವ ಎಂಬ ಮೂರು ವಿಧದ ಗಣಗಳಿವೆ.