ವರ್ಣಮಾಲೆ/ಅಕ್ಷರಮಾಲೆ

ಭಾಷೆಯು ಧ್ವನಿಯ ಮೂಲಕ ಪ್ರಾರಂಭವಾಗಿ ಅಂದರೆ ಮಾತುಗಳಿಂದ ಅಥವಾ ನುಡಿಯಿಂದ ಮತ್ತು ಬರಹ (ಲಿಪಿ) ದಿಂದ ವ್ಯಕ್ತವಾಗುತ್ತದೆ. ಹೀಗೆ ಅಕ್ಷರ ಅಥವಾ ಶಬ್ದಗಳು ಮಾತಿನಲ್ಲಿರುವ ಧ್ವನಿಯ ರೂಪವೇ ಆಗಿದೆ.

ಮಾತಿನಲ್ಲಿರುವ ಧ್ವನಿಯ ರೂಪದ ಭಾಷೆ ನುಡಿದ ಕೂಡಲೇ ಅಳಿಸಿ ಹೊಗುತ್ತದೆ. ಆದರೆ ಬರಹ ರೂಪದಲ್ಲಿರುವ (ಲಿಪಿ) ಸಂಕೇತಗಳು ಅಳಿಯದೆ ಉಳಿಯುವಂತಹುಗಳು, ಆದ್ದರಿಂದಲೆ ʼಅಕ್ಷರʼ ಎಂದರೆ ನಾಶವಾಗದಿರುವುದು ಎಂದರ್ಥ.

ವರ್ಣ ಎಂದರೇನು?

ಭಾಷೆಯ ಅರ್ಥವತ್ತಾದ ಧ್ವನಿಯ ಬರಹರೂಪವುಳ್ಳ ಸಂಕೇತಗಳು ಮಾತ್ರ ಅಕ್ಷರವೆನಿಸುತ್ತದೆ. ಆದ್ದರಿಂದ ಒಂದು ಭಾಷೆಯ ಅತಿ ಚಿಕ್ಕ ಅಂಶವೆಂದರೆ ʼಅಕ್ಷರ/ವರ್ಣʼ. ಕೇಶಿರಾಜನು ಈ ಅಕ್ಷರಗಳನ್ನು ‘ವರ್ಣ’ ಎಂದು ಶಬ್ದಮಣಿದರ್ಪಣದಲ್ಲಿ ತಿಳಿಸಿದ್ದಾನೆ.

ಅತಿಮುಖ್ಯವಾದ ಅಂಶಗಳು

  • ಹಳೆಗನ್ನಡ ವರ್ಣಮಾಲೆಯಲ್ಲಿ ಒಟ್ಟು 50 ಅಕ್ಷರಗಳಿದ್ದು, ಆದರೆ ಪ್ರಸ್ತುತ ಹೊಸಗನ್ನಡ ವರ್ಣಮಾಲೆಯಲ್ಲಿ ‘ಋೂ’ ಅಕ್ಷರವನ್ನು ಹೊರತುಪಡಿಸಿ ಒಟ್ಟು 49 ಅಕ್ಷರಗಳಿವೆ.
  • ಅದೇ ರೀತಿ ಕೇಶಿರಾಜನ ವ್ಯಾಕರಣ ಗ್ರಂಥವಾದ ಶಬ್ದಮಣಿದರ್ಪಣದಲ್ಲಿ 47 ಅಕ್ಷರಗಳಿವೆ. (ಕೇಶಿರಾಜನು ತನ್ನ ವ್ಯಾಕರಣ ಗ್ರಂಥವಾದ ಶಬ್ದಮಣಿದರ್ಪಣದಲ್ಲಿ 47 ಶುದ್ಧಗೆಗಳ ಸಂಖ್ಯೆ ಎಂದು ತಿಳಿಸಿದ್ದಾನೆ.)
  • ಕೆಪಿಎಸ್ಸಿ ಪ್ರಕಾರ ಕನ್ನಡ ವರ್ಣಮಾಲೆಯಲ್ಲಿ ಇರುವ ವರ್ಣಗಳ ಸಂಖ್ಯೆ 49
  • ಕನ್ನಡ ಕೈಪಿಡಿಕಾರರಪ್ರಕಾರ ಕನ್ನಡ ವರ್ಣಮಾಲೆಯಲ್ಲಿರುವ ವರ್ಣಗಳ ಸಂಖ್ಯೆ 32
  • ಆಧುನಿಕ ಭಾಷಾ ವಿಜ್ಞಾನಿಗಳ ಪ್ರಕಾರ ಕನ್ನಡ ವರ್ಣಮಾಲೆಯಲ್ಲಿ ಇರಬೇಕಾದ ವರ್ಣಗಳ ಸಂಖ್ಯೆ 26

ಕನ್ನಡದಲ್ಲಿ ಇರುವ ಒಟ್ಟು 49 ಅಕ್ಷರಗಳನ್ನು ವರ್ಣಗಳೆಂದು ಹಾಗು ವರ್ಣಗಳ ಕ್ರಮಬದ್ಧವಾದ ಜೋಡಣೆಯನ್ನು “ಅಕ್ಷರಮಾಲೆ/ ವರ್ಣಮಾಲೆ” ಎಂದು ಕರೆಯುತ್ತಾರೆ. 

ಕನ್ನಡ ಅಕ್ಷರಗಳನ್ನು ಮುಖ್ಯವಾಗಿ ಮೂರು ವಿಧಗಳಾಗಿ ವಿಂಗಡಿಸಬಹುದು.

I] ಮೂಲಾಕ್ಷರಗಳು (ಅ ಇಂದ ಳ ವರೆಗೆ)
II] ಗುಣಿತಾಕ್ಷರಗಳು (ಕ ಕಾ ಕಿ ಕೀ….)
III] ಸಂಯುಕ್ತಕ್ಷರಗಳು/ಒತ್ತಕ್ಷರಗಳು (ಕ್ಕ, ಮ್ಮ, ವ್ಯ,ಸ್ರ..)

I] ಮೂಲಾಕ್ಷರಗಳು:

ಕನ್ನಡ ವರ್ಣಮಾಲೆಯ ಮೂಲಾಕ್ಷರಗಳನ್ನು ನಾವು ಮತ್ತೆ ಮೂರು ಭಾಗಗಳಾಗಿ ವಿಂಗಡಿಸಬಹುದು.

1) ಸ್ವರಗಳು: ಅ- ಔ (13)
2) ಯೋಗವಾಹಗಳು: ಅಂ, ಅಃ (2)
3) ವ್ಯಂಜನಗಳು: ಕ – ಳ (34)

ಕನ್ನಡ ವರ್ಣಮಾಲೆಯ ಅಕ್ಷರಗಳು
ಸ್ವರಗಳು (13):
ಆ ಇ ಈ ಉ ಊ ಋ ಎ ಏ ಐ ಒ ಓ ಔ
ಯೋಗವಾಹಗಳು (2): ಅಂ (ಅನುಸ್ವಾರ), ಅಃ(ವಿಸರ್ಗ)
ವ್ಯಂಜನಗಳು (34):
ಕ್ ಖ್ ಗ್ ಘ್ ಙ್ ‘ಕ’ ವರ್ಗ 5 ಅಕ್ಷರಗಳು
ಚ್ ಛ್ ಜ್ ಝ್ ಞ್ ‘ಚ’ ವರ್ಗ 5 ಅಕ್ಷರಗಳು
ಟ್ ಠ್ ಡ್ ಢ್ ಣ್ ‘ಟ’ ವರ್ಗ 5 ಅಕ್ಷರಗಳು
ತ್ ಥ್‍ ದ್ ಧ್ ನ್‍ ‘ತ’ ವರ್ಗ 5 ಅಕ್ಷರಗಳು
ಪ್ ಫ್‍ ಬ್‍ ಭ್‍ ಮ್‍ ‘ಪ’ ವರ್ಗ 5 ಅಕ್ಷರಗಳು
ಯ್ ರ್ ಲ್ ವ್ ಶ್ ಷ್ ಸ್‍ ಹ್‍ ಳ್‍

ಯೋಗವಾಹಕ:

ʼಯೋಗʼ ಎಂದರೆ ಸಂಬಂಧವನ್ನು,
ʼವಾಹ್‌ʼಎಂದರೆ ಹೊಂದಿದ್ದು ಎಂದರ್ಥ. ಅಂದರೆ ಒಂದು ಅಕ್ಷರದೊಂದಿಗೆ ಸಂಬಂಧ ಹೊಂದಿದ ಮೇಲೆಯೇ ಉಚ್ಚಾರ ಮಾಡಲು ಬರುವ ಎಂದರ್ಥ

II] ಕನ್ನಡದ ಗುಣಿತಾಕ್ಷರಗಳು :

ಸ್ವರ ಮತ್ತು ವ್ಯಂಜನಗಳು ಸೇರಿ ಆಗುವ ಅಕ್ಷರಗಳನ್ನು
‘ಗುಣಿತಾಕ್ಷರ’ಗಳೆನ್ನುವರು.
ಹೃಸ್ವ: ಕ (ಕ್+ಅ)
ದೀರ್ಘ: ಕಾ (ಕ್+ಆ’)
ಕ ಕಾ ಕಿ ಕೀ ಕು ಕೂ ಕೃ ಕೆ ಕೇ ಕೈ ಕೊ ಕೋ ಕೌ ಕಂ ಕಃ

III] ಸಂಯುಕ್ತಕ್ಷರಗಳು ಅಥವಾ ಒತ್ತಕ್ಷರಗಳು:

ಕನ್ನಡ ಒತ್ತಕ್ಷರಗಳು (34) ಮೂವತ್ನಾಲ್ಕು ಅವು ಯಾವುವೆಂದರೆ:
ಕ್ಕ ಖ್ಖ ಗ್ಗ ಘ್ಘ ಙ್ಙ
ಚ್ಚ ಛ್ಛ ಜ್ಜ ಝ್ಝ ಞ್ಞ
ಟ್ಟ ಠ್ಠ ಡ್ಡ ಢ್ಢ ಣ್ಣ
ತ್ತ ಥ್ಥ ದ್ದ ಧ್ಧ ನ್ನ
ಪ್ಪ ಫ್ಫ ಬ್ಬ ಭ್ಭ ಮ್ಮ
ಯ್ಯ ರ ಲ್ಲ ವ್ವ ಶ್ಶ ಷ್ಷ ಸ್ಸ ಹ್ಹ ಳ್ಳ

1. ಸಜಾತಿಯ ಸಂಯುಕ್ತಾಕ್ಷರ

ಒಂದೆ ಜಾತಿಯ ಎರಡು ವ್ಯಂಜನಗಳು ಸೇರಿ ಆಗುವ ಅಕ್ಷರಗಳು
ಉದಾ: ಅಮ್ಮಾ, ಅವ್ವಾ, ಅಪ್ಪಾ, ಕನ್ನಡ, ಹಬ್ಬ, ಗಿಡ್ಡಿ, ಅಕ್ಕಾ,

2. ವಿಜಾತಿಯ ಸಂಯುಕ್ತಾಕ್ಷರ

ಬೇರೆ ಬೇರೆ ಜಾತಿಯ ಎರಡು ಅಥವಾ ಎರಡಕ್ಕಿಂತ ಹೆಚ್ಚು ವ್ಯಂಜನಗಳು ಸೇರಿ ಆಗುವ ಅಕ್ಷರಗಳು
ಉದಾ: ಶಕ್ತಿ, ಕಂಠ್ಯ, ವಸ್ತ್ರ, ಸ್ತ್ರೀ, ಶ್ರೀ

ಕನ್ನಡದ ಶುದ್ಧಾಕ್ಷರಗಳ ವಿಧಗಳು

ಶುದ್ಧಾಕ್ಷರ ವಿಧಗಳುಗಣನೆಅಕ್ಷರಗಳು
ಸ್ವರ13ಅ ಇಂದ ಔ
ವರ್ಗೀಯ ವ್ಯಂಜನ25ಕಚಟತಪ-ವರ್ಗಗಳು
ಅವರ್ಗೀಯ ವ್ಯಂಜನ9ಯ-ಳ
ಯೋಗವಾಹ2

ಅನುಸ್ವಾರ (ಂ),

ವಿಸರ್ಗ (ಃ)

ಹಳಗನ್ನಡ2ಱ (ರ) ಮತ್ತು ೞ (ಳ)
ಹೊಸ ಸೇರ್ಪಡೆ (English)2ಫ಼ ಮತ್ತು ಜ಼
  • ನಿಪಾತ ಸ್ವರಗಳು
ಈ ಊ
  • ಸಂಧ್ಯಕ್ಷರಗಳು (ಅಯ್‍, ಅವ್‍)
ಐ, ಜೌ
  • ಅವದಾರಣಾಕ್ಷರ
  • ವಿಶಂಕೆ
  • ಕನ್ನಡದಲ್ಲಿ ಸವರ್ಣಾಕ್ಷರಗಳು
    ಅಆ, ಇಈ, ಉಊ, ಎಏ, ಒಓ
  • ಕನ್ನಡದ ವಿಲೋಮ ಸ್ವರಗಳು
    ಆಅ, ಈಇ, ಊಉ, ಏಎ, ಓಒ
  • ಕನ್ನಡದಲ್ಲಿರುವ 5 ಅನುನಾಸಿಕಾಕ್ಷರಗಳು
    ಙ್ ಞ್ ಣ್ ನ್‍ ಮ್‍

ಕನ್ನಡದಲ್ಲಿರುವ ಸಂಧ್ಯಕ್ಷರಗಳು-2

ಸಂಸ್ಕೃತದಲ್ಲಿರುವ ಸಂಧ್ಯಕ್ಷರಗಳು-4

ಕನ್ನಡ ಅಕ್ಷರಗಳ ಉಚ್ಚಾರಣಾ ಸ್ಥಾನಗಳು / ಕನ್ನಡ ವರ್ಣೋತ್ಪತ್ತಿಸ್ಥಾನಗಳು

ವರ್ಣಸ್ಥಾನಅರ್ಥಅಕ್ಷರಗಳು
೧. ಕಂಠ್ಯವರ್ಣಗಂಟಲಿನಿಂದ ಹುಟ್ಟುವ ಅಕ್ಷರಗಳಿಗೆ ಕಂಠ್ಯವರ್ಣಅ ಆಕ ಖ ಗ ಘ ಙಹ ವಿಸರ್ಗ(ಃ)
೨. ತಾಲು/ತಾಲವ್ಯದವಡೆ(ತಾಲು) ಯಿಂದ ಹುಟ್ಟುವ ಅಕ್ಷರಗಳೆ ತಾಲವ್ಯಾಕ್ಷರಗಳುಇ ಈಚ ಛ ಜ ಝ ಞಯ ಶ
೩. ಮೂರ್ಧನ್ಯನಾಲಿಗೆಯ ಮೇಲ್ಬಾಗ ಮತ್ತು ಮೂಗಿನ ಕೆಳಭಾಗದ ಸಹಾಯದಿಂದ ಹುಟ್ಟುವ ಅಕ್ಷರಗಳು.ಟ ಠ ಡ ಢ ಣರ ಷ ಳ
೪. ದಂತ್ಯವರ್ಣಹಲ್ಲುಗಳ ಸಹಾಯದಿಂದ ಹುಟ್ಟುವ ಅಕ್ಷರಗಳು ತ ಥ ದ ಧ ನಸ ಲ
೫. ಓಷ್ಠವರ್ಣತುಟಿಯ ಸಹಾಯದಿಂದ ಹುಟ್ಟುವ ಅಕ್ಷರಗಳುಉ ಊಪ ಫ ಬ ಭ ಮಅಂ (ಅನುಸ್ವಾರ)
6. ದಂತೌಷ್ಠ್ಯಹಲ್ಲು ಮತ್ತು ತುಟಿಯ ಸಹಾಯದಿಂದ ಹುಟ್ಟುವ ಅಕ್ಷರಗಳು  
೭. ಕಂಠತಾಲುಕಂಠ ಮತ್ತು ದವಡೆಯ ಸಹಾಯದಿಂದ ಹುಟ್ಟುವ ಅಕ್ಷರಗಳುಎ ಏ ಐ  
೮. ಕಂಠೋಷ್ಠ್ಯಕಂಠ ಮತ್ತು ತುಟಿಯ ಸಹಾಯದಿಂದ ಹುಟ್ಟುವ ಅಕ್ಷರಗಳುಒ ಓ ಔ  
೯. ನಾಸಿಕವರ್ಣಮೂಗಿನ ಸಹಾಯದಿಂದ ಹುಟ್ಟುವ ಅಕ್ಷರಗಳು ಙ, ಞ ಣ ನ ಮ