ಕೃದಂತಗಳು

ನಮ್ಮ ಮಾತುಗಳಲ್ಲಿ ಮಾಡಿದ, ಹೋಗುವ, ಬರೆಯುವ ಮುಂತಾದ ಪದಗಳನ್ನು ಬಳಸುತ್ತೇವೆ. ಇಲ್ಲಿ ಮಾಡಿದ ಎಂಬ ಪದವನ್ನು ಬಿಡಿಸಿದಾಗ ಮಾಡು+ದ+ಅ ಹಾಗೆಯೇ ‘ಹೋಗುವ’ ಪದದಲ್ಲಿ ಹೋಗು+ವ+ಅ, ‘ಬರೆಯುವ’ ಪದದಲ್ಲಿ ಬರೆ+ಉವ+ಅ ಎಂಬ ¨ ಎಂಬ ಭಾಗಗಳನ್ನು ನೋಡಬಹುದು ಇಲ್ಲಿ ಮೊದಲನೆಯದು ‘ಧಾತು’ ಎಂತಲೂ ಎರಡನೆಯದು ಮೂರನೆಯದು ಪ್ರತ್ಯಯಗಳೆಂತಲೂ ಕರೆಯಲ್ಪಡುತ್ತವೆ. ಧಾತುಗಳಿಗೆ ಈ ಪ್ರತ್ಯಯಗಳು ಸೇರದ ರೂಪವನ್ನು ನಾಮಪ್ರಕೃತಿಗಳೆಂದು ಕರೆಯುತ್ತಾರೆ. ಇವುಗಳನ್ನು ಕೃದಂತನಾಮಪ್ರಕೃತಿಗಳೆಂದು ಕರೆಯಲಾಗುವುದು. ಈ ಕೃದಂತ ನಾಮಪ್ರಕೃತಿಗಳಿಗೆ ವಿಭಕ್ತಿ ಪ್ರತ್ಯಯಗಳನ್ನು ಸೇರಿಸಿದಾಗ ಅವುಗಳು ಕೃದಂತನಾಮ ಪದಗಳೆನಿಸುತ್ತವೆ. ಈ ಉದಾಹರಣೆಗಳ ಕೊನೆಯಲ್ಲಿರುವ ‘ಅ’ ಎಂಬುದೇ ಕೃತ್‌ಪ್ರತ್ಯಯ.

  • ಕೃದಂತ ಪದಗಳು ಎಂದಿಗೂ ಕ್ರಿಯೆಯನ್ನು ಪೂರ್ಣಗೊಳಿಸುವುದಿಲ್ಲ. ಅಂದರೆ ಕ್ರಿಯೆಯು ಅಪೂರ್ಣವಾಗಿರುವಂತ ಪದವಾಗಿರುತ್ತದೆ.

ಸೂತ್ರ : ಧಾತುಗಳಿಗೆ ಕೃತ್‌ಪ್ರತ್ಯಯಗಳು ಸೇರಿ ಕೃದಂತಗಳೆನಿಸುತ್ತವೆ. ಇದಕ್ಕೆ ಕೃನ್ನಾಮಗಳೆಂಬ ಹೆಸರೂ ಇದೆ.

ಕೃದಂತಗಳಲ್ಲಿ ಮೂರು ವಿಧಗಳಿವೆ. 1. ಕೃದಂತನಾಮ 2. ಕೃದಂತಭಾವನಾಮ 3. ಕೃದಂತಾವ್ಯಯ

ಕೃದಂತನಾಮ ಕೃದಂತಭಾವನಾಮ ಕೃದಂತಾವ್ಯಯ
ಮಾಡಿದ ಮಾಟ ಮಾಡಿ
ತಿನ್ನುವ ತಿನ್ನುವಿಕೆ ತಿಂದು
ನಡೆಯುವ ನಡೆತ ನಡೆಯುತ್ತ
ಓಡಿದ ಓಟ ಓಡಿ

ಕೃದಂತನಾಮಗಳು :– ಧಾತುಗಳಿಗೆ ಕರ್ತೃ ಮೊದಲಾದ ಅರ್ಥದಲ್ಲಿ ಸಾಮಾನ್ಯವಾಗಿ ‘ಅ’ ಎಂಬ ಕೃತ್‌ಪ್ರತ್ಯಯ ಬರುವುದು. ಧಾತುವಿಗೂ ಕೃತ್ ಪ್ರತ್ಯಯಕ್ಕೂ ಮಧ್ಯದಲ್ಲಿ ಕಾಲಸೂಚಕ ಪ್ರತ್ಯಯಗಳು ಸೇರಿಕೊಳ್ಳುತ್ತವೆ. ಇವುಗಳನ್ನೇ ಕೃದಂತನಾಮಗಳೆನ್ನುವರು.
ಉದಾ :
ವರ್ತಮಾನಕೃದಂತಕ್ಕೆ :
ಓಡು+ವ+ಅ = ಓಡುವ
ಬಾಳು+ವ+ಅ = ಬಾಳುವ
ಬರೆ+ಉವ+ಅ = ಬರೆಯುವ

ಭೂತಕಾಲಕ್ಕೆ :
ಓಡು+ದ+ಅ = ಓಡಿದ
ಬಾಳು+ದ+ಅ = ಬಾಳಿದ
ಬರೆ+ದ+ಅ = ಬರೆದ

ನಿಷೇಧ ಕೃದಂತಕ್ಕೆ:
ಓಡು+ಅದ+ಅ = ಓಡದ
ಬಾಳು+ಅದ+ಅ = ಬಾಳದ
ಬರೆ+ಅದ+ಅ = ಬರೆಯದ

ಇವುಗಳಿಗೆ ವಿಭಕ್ತಿ ಪ್ರತ್ಯಯಗಳನ್ನು ಸೇರಿಸಿದಾಗ ಲಿಂಗಗಳಿಗನುಗುಣವಾಗಿ ಆಗುವ ಬದಲಾವಣೆಗಳನ್ನು
ಗಮನಿಸಿ.
ಓಡುವ+ಅವನು+ಉ = ಓಡುವವನು
ಓಡುವ+ಅವನು+ಇಂದ = ಓಡುವವನಿಂದ
ಓಡುವ+ಅವಳು+ಅಲ್ಲಿ = ಓಡುವವಳಲ್ಲಿ
ಓಡುವ+ಉದು+ಅನ್ನು = ಓಡುವುದನ್ನು

ಪುಲ್ಲಿಂಗದಲ್ಲಿ ಕೃದಂತ + ನಾಮವಿಭಕ್ತಿ ಪ್ರತ್ಯಯಗಳ ಬಳಕೆ:-
ಹೋಗು + ಅವನು + ಉ = ಹೋಗುವನು
ಹೋಗು + ಅವರು + ಉ = ಹೋಗುವರು
ಹೋಗು + ಅವನು + ಅನ್ನು = ಹೋಗುವವನನ್ನು
ಹೋಗು + ಅವರು + ಅನ್ನು = ಹೋಗುವವರನ್ನು
ಹೋಗು + ಅವನು + ಇಂದ = ಹೋಗುವವನಿಂದ
ಹೋಗು + ಅವರು + ಇಂದ = ಹೋಗುವವರಿಂದ
ಹೋಗು + ಅವನು + ಗೆ = ಹೋಗುವವನಿಗೆ
ಹೋಗು + ಅವರು + ಗೆ = ಹೋಗುವವರಿಗೆ
ಹೀಗೆ ವಿಭಕ್ತಿ ಪ್ರತ್ಯಯಗಳನ್ನು ಮುಂದುವರಿಸಬಹುದು.

ಸ್ತ್ರೀಲಿಂಗದಲ್ಲಿ ಕೃದಂತ + ನಾಮವಿಭಕ್ತಿ ಪ್ರತ್ಯಯಗಳ ಬಳಕೆ:-
ಹೋಗು + ಅವಳು + ಉ = ಹೋಗುವಳು
ಹೋಗು + ಅವರು + ಉ = ಹೋಗುವರು
ಹೋಗು + ಅವಳು + ಅನ್ನು = ಹೋಗುವವಳನ್ನು
ಹೋಗು + ಅವರು + ಅನ್ನು = ಹೋಗುವವರನ್ನು
ಹೋಗು + ಅವಳು + ಇಂದ = ಹೋಗುವವಳಿಂದ
ಹೋಗು + ಅವರು + ಇಂದ = ಹೋಗುವವರಿಂದ
ಹೋಗು + ಅವಳು + ಗೆ = ಹೋಗುವವಳಿಗೆ
ಹೋಗು + ಅವರು + ಗೆ = ಹೋಗುವವರಿಗೆ
ಹೀಗೆ ವಿಭಕ್ತಿ ಪ್ರತ್ಯಯಗಳನ್ನು ಮುಂದುವರಿಸಬಹುದು.

ಸೂತ್ರ :- ಧಾತುಗಳ ಮೇಲೆ ಭಾವಾರ್ಥದಲ್ಲಿ ಕೃತ್ ಪ್ರತ್ಯಯಗಳು ಸೇರಿದಾಗ ಕೃದಂತ ಭಾವನಾಮಗಳಾಗುತ್ತವೆ.

ಕೃದಂತಭಾವನಾಮ :

ಈ ವಾಕ್ಯಗಳನ್ನು ಗಮನಿಸಿ.
– ಆತನ ಓಟ ಚೆನ್ನಾಗಿತ್ತು
– ಗಡಿಗೆಯ ಮಾಟ ಸೊಗಸಾಗಿದೆ
– ಅದರ ನೆನಪು ಇಲ್ಲ
– ಇದರ ಕೊರೆತ ಹಸನಾಗಿದೆ.
ಈ ವಾಕ್ಯಗಳಲ್ಲಿ ಗೆರೆ ಎಳೆದಿರುವ ಪದಗಳು ವಿಶೇಷ ರೀತಿಯ ಅರ್ಥಗಳನ್ನು ನೀಡುತ್ತವೆ.
– ಓಡುವ ರೀತಿಯೇ – ಓಟ – ಓಡು + ಟ
– ಮಾಡಿರುವ ರೀತಿಯೇ – ಮಾಟ – ಮಾಡು + ಟ
– ನೆನೆಯುವ ರೀತಿಯೇ – ನೆನಪು – ನೆನೆ + ಪು
– ಕೊರೆದಿರುವಿಕೆಯೇ – ಕೊರೆತ – ಕೊರೆ + ತ
ಇವೆಲ್ಲವೂ ಕ್ರಿಯೆಯ ಭಾವವನ್ನು ತಿಳಿಸುವುದರಿಂದ ಇವುಗಳನ್ನು ಕೃದಂತ ಭಾವನಾಮ ಎಂದು ಕರೆಯಲಾಗುತ್ತದೆ. ಇವುಗಳನ್ನು ಭಾವಕೃದಂತಗಳೆಂದೂ ಕರೆಯುವ ರೂಢಿ ಇದೆ.
ಉದಾ :-
ಧಾತು ಭಾವಾರ್ಥದಲ್ಲಿ ಕೃದಂತ ಇತರ ಕೃತ್‌ಪ್ರತ್ಯಯ ಭಾವನಾಮ ರೂಪಗಳು
ಓಡು ಟ ಓಟ ನೋಟ
ಬಾಳು ವಿಕೆ ಬಾಳುವಿಕೆ ಬರೆಯುವಿಕೆ
ಅಂಜು ಇಕೆ ಅಂಜಿಕೆ ನಂಬಿಕೆ
ಉಡು ಗೆ ಉಡುಗೆ ತೊಡುಗೆ
ನಗು ಉದು ನಗುವುದು ತಿನ್ನುವುದು
ಹೀಗೆ… ಉದು, ವಿಕೆ, ಇಕೆ, ಇಗೆ, ಅವು, ವು, ತ, ಟ, ವಳಿ, ಪು, ಅಲು, ಎ, ಅಕೆ, ವಳಿಕೆ, ವಣಿಗೆ ಎಂಬ ಕೃತ್‌ಪ್ರತ್ಯಯಗಳು ಭಾವಾರ್ಥದಲ್ಲಿ ಧಾತುಗಳಿಗೆ ಸೇರುವ ಮೂಲಕ ಕೃದಂತ ಭಾವನಾಮಗಳಾಗುತ್ತವೆ.

ಅಂಜು + ಇಕೆ (ಅಂಜುವುದರ ಭಾವ) = ಅಂಜಿಕೆ
ನಂಬು + ಇಕೆ (ನಂಬುವುದರ ಭಾವ) = ನಂಬಿಕೆ
ತಿನ್ನು + ಇಕೆ (ತಿನ್ನುವುದರ ಭಾವ) = ತಿನ್ನುವಿಕೆ
ಬಾಳು + ವಿಕೆ (ಬಾಳುವುದರ ಭಾವ) = ಬಾಳುವಿಕೆ
ಬರೆ + ವಿಕೆ (ಬರೆಯುವುದರ ಭಾವ) = ಬರೆಯುವಿಕೆ
ಉಡು + ಗೆ (ಉಡುವುದರ ಭಾವ) = ಉಡುಗೆ
ತೊಡು + ಗೆ (ತೊಡುವುದರ ಭಾವ) = ತೊಡುಗೆ
ಓಡು + ಟ (ಓಡುವುದರ ಭಾವ) = ಓಟ
ನೋಡು + ಟ (ನೋಡುವುದರ ಭಾವ) = ನೋಟ
ಮಾಡು + ಟ (ಮಾಡುವುದರ ಭಾವ) = ಮಾಟ
ನಗು + ವುದು (ನಗುವುದರ ಭಾವ) = ನಗುವುದು
ತಿನ್ನು + ವುದು (ತಿನ್ನುವುದರ ಭಾವ) = ತಿನ್ನುವುದು
ದಣಿ + ವು (ದಣಿಯುವುದರ ಭಾವ) = ದಣಿವು
ಕೊರೆ + ತ (ಕೊರೆಯುವುದರ ಭಾವ) = ಕೊರೆತ
ನಡೆ + ಅತೆ (ನಡೆಯುವುದರ ಭಾವ) = ನಡತೆ
ಅಳೆ + ತೆ (ಅಳೆಯುವುದರ ಭಾವ) = ಅಳೆತೆ
ಒಪ್ಪು + ಇತ (ಒಪ್ಪುವುದರ ಭಾವ) = ಒಪ್ಪಿತ
ನೆನೆ + ಪು (ನೆನೆಯುವುದರ ಭಾವ) = ನೆನೆಪು
ಮೊಳೆ + ಕೆ (ಮೊಳೆಯುವುದರ ಭಾವ) = ಮೊಳೆಕೆ
ಸಲು + ವಳಿ (ಸಲುವುದರ ಭಾವ) = ಸಲುವಳಿ
ತಿಳಿ + ವಳಿಕೆ (ತಿಳಿಯುವುದರ ಭಾವ) = ತಿಳಿವಳಿಕೆ
ಮೆರೆ + ವಣಿಗೆ(ಮೆರೆಯುವುದರ ಭಾವ) = ಮೆರೆವಣಿಗೆ

ಸೂತ್ರ :- ಧಾತುಗಳ ಮೇಲೆ ಉತ್ತ, ಅದೆ, ದರೆ, ಅಲು, ಅಲಿಕೆ, ಅ, ಇ, ದು ಇತ್ಯಾದಿ ಪ್ರತ್ಯಯಗಳು ಸೇರಿ
ಕೃದಂತಾವ್ಯಯಗಳಾಗುತ್ತವೆ.

ಕೃದಂತಾವ್ಯಯಗಳು

ಧಾತುಗಳಿಂದ ಹುಟ್ಟಿ ಅವ್ಯಯದ ಗುಣವನ್ನು ಪಡೆದಂತಹ ಪದಗಳನ್ನು ಕೃದಂತಾವ್ಯಯಗಳು ಅಥವಾ
ಅವ್ಯಯಕೃದಂತಗಳೆಂದು ಕರೆಯಲಾಗುತ್ತದೆ.
ಉದಾ :- ಉಣ್ಣದೆ, ಬರುತ್ತ, ಬರೆದು, ಹೋಗಲಿಕ್ಕೆ.

ಉದಾ :- ಮಾಡು + ಉತ್ತ = ಮಾಡುತ್ತ
ಮಾಡು + ಅದೆ = ಮಾಡದೆ
ಮಾಡು + ಅಲು = ಮಾಡಲು
ಮಾಡು + ಅಲಿಕ್ಕೆ = ಮಾಡಲಿಕ್ಕೆ
ಮಾಡು + ಅ = ಮಾಡ
ಮಾಡು + ಇ = ಮಾಡಿ
ಬರೆ + ದು = ಬರೆದು

ಪ್ರತ್ಯಯಗಳುಧಾತುಪ್ರತ್ಯಯಕೃದಂತಾವ್ಯಯ
ಉತನೋಡು+ ಉತ

ನೋಡುತ

ಇದರಂತೆ

ಮಾಡುತ

ಹಾಡುತ

ಉತ್ತನೋಡು+ ಉತ್ತ

ನೋಡುತ್ತ

ಮಾಡುತ್ತ

ನಡೆಯುತ್ತ

ಅದೆನೋಡು+ ಅದೆ

ನೋಡದೆ

ಮಾಡದೆ

ಹಾಡದೆ

ದರೆತಿನ್ನು+ ದರೆ

ತಿಂದರೆ

ಕೊಂದರೆ

ಬಂದರೆ

ಅಲುನೋಡು+ ಅಲು

ನೋಡಲು

ಮಾಡಲು

ಹಾಡಲು

ಅಲಿಕ್ಕೆನೋಡು+ಅಲಿಕ್ಕೆ

ನೋಡಲಿಕ್ಕೆ

ಮಾಡಲಿಕ್ಕೆ

ಹಾಡಲಿಕ್ಕೆ

ನೋಡು+ ಅ

ನೋಡ

ಮಾಡ

ಹಾಡ

ನೋಡು+ ಇ

ನೋಡಿ

ಮಾಡಿ

ಹಾಡಿ

ದುಬರು+ದು

ಬಂದು

ಕರೆದು

ಕುಡಿದು