ಇನ್ನು ಕೆಲವೆ ದಿನಗಳಲ್ಲಿ ಮಾಹಿತಿಯನ್ನು ಅಪ್ಡೇಟ್‌ ಮಾಡಲಾಗುವುದು.

ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುವಂತೆ ಉಚಿತ ಮಾಹಿತಿಯನ್ನು ರಚಿಸಲಾಗುತ್ತಿದೆ.

ಗೆದ್ದೇ ಗೆಲ್ಲುವೆ ಒಂದು ದಿನ, ಗೆಲ್ಲಲೇ ಬೇಕು ಒಳ್ಳೆತನ.

ಆತ್ಮೀಯ ಸ್ಪರ್ಧಾ ಮಿತ್ರರೇ ನಮ್ಮ ನಾಡು ನುಡಿ ಸಂಸ್ಕೃತಿಯ ಪ್ರತೀಕವಾಗಿರುವ ಕನ್ನಡ ಭಾಷೆಯನ್ನು ಎಲ್ಲರಿಗೂ ಸರಳವಾಗಿ ಹಾಗೂ ಸುಲಭವಾಗಿ ಕಲಿಯಲು ಅವಕಾಶ ಮಾಡುವಂತಹ ಪ್ರಯತ್ನ ನಮ್ಮದು. ಇದರ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡ ಭಾಷೆಯನ್ನು ವ್ಯಾಕರಣಬದ್ಧವಾಗಿ ಹರಿಯುವ ದೃಷ್ಟಿಯಿಂದ ಸಾಮಾನ್ಯ ಕನ್ನಡದ ಮೇಲೆ ಪ್ರಶ್ನೆಗಳನ್ನು ಕೇಳಲಾಗುತ್ತದೆ.
ಹಾಗೊಂದು ದೃಷ್ಟಿಕೋನದಿಂದ ಎಲ್ಲಾ ಸ್ಪರ್ಧಾತ್ಮಕ ಅಭ್ಯರ್ಥಿಗಳಿಗೆ ಕನ್ನಡ ಪಠ್ಯಕ್ರಮವು ಎಲ್ಲ ಪರೀಕ್ಷೆಗಳಿಗೆ ಅನುಗುಣವಾಗಿ ಸಿಗಬೇಕೆಂಬ ಸದುದ್ದೇಶದೊಂದಿಗೆ ಕನ್ನಡವನ್ನು ಸರಳವಾಗಿ ಕಲಿಸುವ ಹಾಗೂ ಕನ್ನಡ ವ್ಯಾಕರಣ ಹಾಗೂ ಸಾಹಿತ್ಯವನ್ನು ಸಂಪೂರ್ಣವಾಗಿ ಪರೀಕ್ಷೆಗೆ ಬೇಕಾದಂತಹ ರೀತಿಯಲ್ಲಿ ಒದಗಿಸುವಂತಹ ಒಂದು ಪ್ರಯತ್ನ ನಮ್ಮದಾಗಿದೆ. ಈ ಒಂದು ಪ್ರಯತ್ನಕ್ಕೆ ತಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ಸಿಗುತ್ತದೆ ಎಂದು ಭಾವಿಸುತ್ತೇನೆ. ನಮ್ಮ ನಾಡು ನುಡಿಯನ್ನು ಒಗ್ಗಟ್ಟಾಗಿ ಬೆಳೆಸೋಣ ಹಾಗೂ ಕಲಿಸೋಣ.
ಇಂತಿ ನಿಮ್ಮ ವಿಶ್ವಾಸಿ
ಸಂಜೀವ ವಿ ರಾಯ್ಕರ್‌

ಕನ್ನಡ ಬೆಳೆಸಿ, ಕನ್ನಡ ಉಳಿಸಿ.

ಕನ್ನಡಾಂಬೆಯ ಚರಣಗಳಿಗೆ ಸಾಷ್ಟಾಂಗ ಸಮನಗಳು