ವಚನಗಳು

ಒಂದು ಎಂಬುದನ್ನು ಸೂಚಿಸುವ ಶಬ್ದಗಳೆಲ್ಲ ಏಕವಚನಗಳು. ಒಂದಕ್ಕಿಂತ ಹೆಚ್ಚು ಎಂಬುದನ್ನು ಸೂಚಿಸುವ ಶಬ್ದಗಳಿಗೆ ಬಹುವಚನ ಎನ್ನುತ್ತೇವೆ.
ಕನ್ನಡ ಭಾಷೆಯಲ್ಲಿ ಏಕವಚನ, ಬಹುವಚನಗಳೆಂದು ಎರಡು ಪ್ರಕಾರಗಳಿವೆ.

ಕನ್ನಡದ ವಚನಗಳಲ್ಲಿ ಮುಖ್ಯವಾಗಿ ಎರಡು ವಿಧಗಳಿವೆ. ಅವುಗಳೆಂದರೆ:
1. ಏಕವಚನ (ಒಂದು)
2. ಬಹುವಚನ (ಒಂದಕ್ಕಿಂತ ಹೆಚ್ಚು)

“ಸಾಹಿತ್ಯದ ದೃಷ್ಠಿಯಲ್ಲಿ ವಚನ ಎಂದರೆ – “ಪರಿಶುದ್ಧ / ನೀತಿಯುಕ್ತ ಮಾತು ಎಂದರ್ಥ. ಆದರೆ ವ್ಯಾಕರಣದ ದೃ಼ಷ್ಠಿಯಲ್ಲಿ ವಚನ ಎಂದರೆ” ಸಂಖ್ಯೆ” ಎಂದರ್ಥ.

ಸಂಸ್ಕೃತದಲ್ಲಿ ಮೂರು ವಚನಗಳಿವೆ.
1. ಏಕವಚನ (ಒಂದು)
2. ದ್ವಿವಚನ (ಎರಡು)
3. ಬಹುವಚನ (ಎರಡಕ್ಕಿಂತ ಹೆಚ್ಚು)

1. ಏಕವಚನ: “ಒಬ್ಬ ವ್ಯಕ್ತಿ, ಒಂದು ವಸ್ತು, ಒಂದು ಸ್ಥಳ ಎಂದು ಹೇಳುವ ಶಬ್ದಗಳಿಗೆ ʼಏಕವಚನʼ ಎಂದು ಕರೆಯುತ್ತಾರೆ.
ಉದಾ: ನಾನು, ನೀನು, ಅವನು, ಅದು, ಮರ, ಅರಸ, ರಾಣಿ, ಮನೆ, ಊರು, ಕವಿ, ತಂದೆ, ತಾಯಿ, ಇತ್ಯಾದಿ

2) ಬಹುವಚನ: “ಒಂದಕ್ಕಿಂತ ಹೆಚ್ಚು ವ್ಯಕ್ತಿ, ವಸ್ತುಗಳನ್ನು ಕುರಿತು ಹೇಳುವ ಶಬ್ದಗಳಿಗೆ ʼಬಹುವಚನʼ ಎಂದು ಕರೆಯುತ್ತಾರೆ.
ಉದಾ: ನಾವು, ನೀವು, ಅವರು, ಅವು, ಮರಗಳು, ಅರಸರು, ರಾಣಿಯರು, ಮನೆಗಳು, ಊರುಗಳು, ಕವಿಗಳು, ಇತ್ಯಾದಿ

 ಒಂದಕ್ಕಿಂತ ಹೆಚ್ಚು ವ್ಯಕ್ತಿ ಅಥವಾ ವಸ್ತುವನ್ನು ಕುರಿತು ಮಾತನಾಡುವಾಗ ಬಹುವಚನ ಪ್ರತ್ಯಯ ಬಳಕೆಯಾಗುತ್ತದೆ.
 ಬಹುವಚನ ಪ್ರತ್ಯಯ ಬಳಕೆಯಾದಾಗ ಕ್ರಿಯಾಪದದ ರೂಪದಲ್ಲಿ ವ್ಯತ್ಯಾಸವಾಗಿ ಅಲ್ಲಿಯೂ ಬಹುವಚನದ ರೂಪ ಬಳಕೆಯಾಗುತ್ತದೆ.

ದ್ವಿವಚನ: ದ್ವಿವಚನವನ್ನು ಸಂಸ್ಕೃತದಲ್ಲಿ ಮಾತ್ರ ಬಳಸಲಾಗುವುದು. ದ್ವಿ ಎಂದರೆ ಎರಡು ಎಂದರ್ಥ. ಎರಡು ನಾಮಪದಗಳನ್ನು ತಿಳಿಸುವಾಗ ದ್ವಿವಚನವನ್ನು ಬಳಸಲಾಗುತ್ತದೆ.
ಉದಾ: ಕಣ್ಣುಗಳು, ಕಾಲುಗಳು, ಕೈಗಳು, ಕಿವಿಗಳು ಇತ್ಯಾದಿ.

ಏಕವಚನಬಹುವಚನ
ಅಣ್ಣಅಣ್ಣಂದಿರು
ಗುರುಗುರುಗಳು
ಮನೆಮನೆಗಳು
ಕಣ್ಣು (FDA 2017)ಕಣ್ಣುಗಳು
ಅಂಗುಲ (FDA 1991)ಅಂಗುಲಗಳು
ಮಗು (ಪ್ರಾ.ಶಿ 2001)ಮಕ್ಕಳು
ದೊಡ್ಡವನು (ಪುಲ್ಲಿಂಗ)ದೊಡ್ಡವರು
ದೊಡ್ಡವಳು (ಸ್ತ್ರೀಲಿಂಗ)ದೊಡ್ಡವಳು
ದೊಡ್ಡದು (ನಪುಂಸಕಲಿಂಗ)ದೊಡ್ಡವು

ಈ ಕೆಳಗೆ ಕೆಲವು ಉದಾಹರಣೆಗಳನ್ನು ನೀಡಲಾಗಿದೆ. ಅವುಗಳಲ್ಲಿ ಬರುವ ಬಹುವಚನ ಪ್ರತ್ಯಯಗಳ ಬಗ್ಗೆ ತಿಳಿಯೋಣ.
ಏಕವಚನದ ನಾಮಪ್ರಕೃತಿಗಳಿಗೆ ಅರು, ವು, ಗಳು, ಅಂದಿರು, ಅಂದಿರುಗಳು, ಇರು, ವು ಇತ್ಯಾದಿ ಬಹುವಚನ
ಸೂಚಕಗಳು ಸೇರಿ ಬಹುವಚನ ಪದಗಳಾಗುತ್ತವೆ.
ವಚನ = ನಾಮಪ್ರಕೃತಿ+ಪ್ರತ್ಯಯಗಳು

ನಾಮಪ್ರಕೃತಿ+ಪ್ರತ್ಯಯಗಳು=ನಾಮಪದ
ಅರಸ+ಅರು=ಅರಸರು
ಬಾಲಕಿ+ಅರು=ಬಾಲಕಿಯರು
ಬಾಲಕ+ಅರು=ಬಾಲಕರು
ಅಕ್ಕ+ಅಂದಿರು=ಅಕ್ಕಂದಿರು
ಚಿಕ್ಕಪ್ಪ+ಅಂದಿರು=ಚಿಕ್ಕಪ್ಪಂದಿರು
ಮರ+ಗಳು=ಮರಗಳು
ದನ+ಗಳು=ದನಗಳು
ಮಗು+ಕಳು=ಮಕ್ಕಳು
ನೀನು+ವು=ನೀವು
ಅವನು+ಅರು=ಅವರು

ಈ ಮೇಲಿನ ಉದಾಹರಣೆಗಳನ್ನು ಗಮನಿಸಿ. ಉದಾ:

  • ಅರಸ, ಬಾಲಕಿ, ಬಾಲಕ ಎಂಬ ಪದಗಳಿಗೆ -ಅರು ಎಂಬ ಬಹುವಚನ ಪ್ರತ್ಯಯ ಸೇರಿ ಅರಸರು, ಬಾಲಕಿಯರು, ಬಾಲಕರು ಎಂಬ ಬಹುವಚನರೂಪ ಪದಗಳಾಗಿವೆ.
  • ಈ ಉದಾಹರಣೆಗಲ್ಲಿ ಸಂಬಂಧವಾಚಿ ಪ್ರತ್ಯಯಗಳು ಬಳಕೆಯಾಗಿದ್ದು -ಅಂದಿರು ಎಂಬ ಬಹುವಚನ ಪ್ರತ್ಯಯ ಬಳಕೆಯಾಗಿದೆ. ಅಕ್ಕ+ಅಂದಿರು=ಅಕ್ಕಂದಿರು, ಚಿಕ್ಕಪ್ಪ+ಅಂದಿರು= ಚಿಕ್ಕಪ್ಪಂದಿರು.
  • ಮರ, ದನ ಈ ಪದಗಳಿಗೆ -ಗಳು ಎಂಬ ಬಹುವಚನ ಪ್ರತ್ಯಯ ಸೇರಿ ಮರಗಳು, ದನಗಳು ಎಂಬ ಬಹುವಚನರೂಪ ನಾಮಪದಗಳಾಗಿವೆ.
  • ಅದೇ ರೀತಿ ವಚನಗಲ್ಲಿ ಸರ್ವನಾಮಪದಗಳೇನು ಹೊರತಾಗಿಲ್ಲ. ನೀನು ಏಕವಚನ ಪದಕ್ಕೆ _ವು ಬಹುವಚನ ಪ್ರತ್ಯಯ ಬಳಕೆಯಾಗಿದ್ದು ನೀನು+ವು =ನೀವು ಎಂಬ ಬಹುವಚನ ಪದವಾಗಿದೆ. ಮಗು ನಾಮಪ್ರಕೃತಿಗೆ -ಕಳು ಬಹುವಚನ ಪ್ರತ್ಯಯ ಸೇರಿ ಮಕ್ಕಳು ಎಂಬ ಬಹುವಚನ ಪದವಾಗಿದೆ.

ಕೆಳಗಿನ ವಾಕ್ಯಗಳನ್ನು ಗಮನಿಸಿ ವ್ಯತ್ಯಾಸ ತಿಳಿಯಿರಿ :
೧) ನನ್ನ ಬಳಿ ಒಂದು ಚೆಂಡು ಇದೆ.
೨) ಅನ್ವರನ ಬಳಿ ನಾಲ್ಕು ಚೆಂಡುಗಳು ಇವೆ.
೩) ಬೆಂಗಳೂರಿನಿಂದ ನಮ್ಮ ಶಾಲೆಗೆ ಒಬ್ಬಳು ಹುಡುಗಿ ಬಂದಿದ್ದಾಳೆ.
೪) ಮೈಸೂರಿನಿಂದ ನಮ್ಮ ಶಾಲೆಗೆ ಮೂವರು ಹುಡುಗಿಯರು ಬಂದಿದ್ದಾರೆ.
೫) ನಾಳೆ ವಿಜಯಪುರಕ್ಕೆ ಚೆಸ್ ಪಂದ್ಯದಲ್ಲಿ ಭಾಗವಹಿಸಲು ಒಬ್ಬ ಹುಡುಗ ಹೋಗುತ್ತಾನೆ.
೬) ನಾಳೆ ಬಾದಾಮಿಗೆ ಕ್ರಿಕೆಟ್ ಪಂದ್ಯದಲ್ಲಿ ಭಾಗವಹಿಸಲು ಹದಿನಾರು ಹುಡುಗರು ಹೋಗುತ್ತಾರೆ.


೧ನೆಯ ವಾಕ್ಯ ಗಮನಿಸಿ. ಇಲ್ಲಿ ಚೆಂಡು ಎಂಬುದು ನಾಮಪದ. ಇದೆ ಎಂಬುದು ಕ್ರಿಯಾಪದ.
೨ನೆಯ ವಾಕ್ಯ ಗಮನಿಸಿ ಚೆಂಡುಗಳು ಎಂಬುದು ನಾಮಪದ. ಇವೆ ಎಂಬುದು ಕ್ರಿಯಾಪದ.
ಮೊದಲ ವಾಕ್ಯದಲ್ಲಿ ಚೆಂಡು ಒಂದು ಇದೆ. ಇದರಿಂದ ಚೆಂಡು ಎಂಬ ಪದ ಬಳಕೆಯಾಗಿದೆ.
ಆದರೆ ಎರಡನೆಯ ವಾಕ್ಯದಲ್ಲಿ ಒಂದಕ್ಕಿಂತ ಹೆಚ್ಚು(ನಾಲ್ಕು) ಚೆಂಡುಗಳಿವೆ. ಇದರಿಂದ ಚೆಂಡುಗಳು ಎಂಬ ಪದ ಬಳಕೆಯಾಗಿದೆ. ಇಲ್ಲಿ -ಗಳು ಎಂಬುದು ಬಹುವಚನ ಸೂಚಿಸುವ ಪ್ರತ್ಯಯ.
೩ನೆಯ ವಾಕ್ಯ ಗಮನಿಸಿ, ಇಲ್ಲಿ ಹುಡುಗಿ ಎಂಬುದು ನಾಮಪದ. ಬಂದಿದ್ದಾಳೆ ಎಂಬುದು ಕ್ರಿಯಾಪದ. ೪ನೆಯ ವಾಕ್ಯ ಗಮನಿಸಿ, ಹುಡುಗಿಯರು ಎಂಬುದು ನಾಮಪದ ಬಂದಿದ್ದಾರೆ ಎಂಬುದು ಕ್ರಿಯಾಪದ.

ಮೊದಲ ವಾಕ್ಯದಲ್ಲಿ ಒಬ್ಬಳು ಹುಡುಗಿ ಎಂದಿರುವುದರಿಂದ ಹುಡುಗಿ ಎಂಬ ಪದ ಬಳಕೆಯಾಗಿದೆ. ಆದರೆ ಎರಡನೆಯ ವಾಕ್ಯದಲ್ಲಿ ಒಂದಕ್ಕಿಂತ ಹೆಚ್ಚು ಹುಡುಗಿಯರಿರುವುದರಿಂದ ಹುಡುಗಿಯರು ಎಂಬ ಪದ ಬಳಕೆಯಾಗಿವೆ. ಇಲ್ಲಿ -ಅರು ಎಂಬುದು ಬಹುವಚನ ಸೂಚಿಸುವ ಪ್ರತ್ಯಯ.
೫ನೆಯ ವಾಕ್ಯ ಗಮನಿಸಿ. ಇಲ್ಲಿ ಹುಡುಗಎಂಬುದು ನಾಮಪದ. ಹೋಗುತ್ತಾನೆಎಂಬುದು
ಕ್ರಿಯಾಪದ. ೬ನೆಯ ವಾಕ್ಯ ಗಮನಿಸಿ. ಹುಡುಗರು ಎಂಬುದು ನಾಮಪದ. ಹೋಗುತ್ತಾರೆ
ಎಂಬುದು ಕ್ರಿಯಾಪದ. ಮೊದಲ ವಾಕ್ಯದಲ್ಲಿ ಒಬ್ಬ ಹುಡುಗ ಎಂದಿರುವುದರಿಂದ ಹುಡುಗ