ಹಲ್ಮಿಡಿ ಶಾಸನ ಪ್ರಸ್ತುತ ಹಾಸನ ಜಿಲ್ಲೆಯ ಹಲ್ಮಿಡಿ ಗ್ರಾಮದಲ್ಲಿ ದೊರೆತಿದೆ. ಇದನ್ನು ಕನ್ನಡದ ಪ್ರಥಮ ಶಿಲಾ ಶಾಸನ ಎಂದು ಪರಿಗಣಿಸಲಾಗಿದೆ. ಈ ಶಾಸನವನ್ನು ಕದಂಬರ ಆಳ್ವಿಕೆಯಲ್ಲಿ ನರಿದಾವಿಳೆ ಪ್ರಾಂತ್ಯದ ಅಧಿಕಾರಿಗಳಾದ ಮೃಗೇಶ ಮತ್ತು ನಾಗೇಂದ್ರ ಎಂಬುವರು ಕೇಕಯ ಮತ್ತು ಪಲ್ಲವರೊಡನೆ ಹೋರಾಡಿ ಜಯಗಳಿಸಿದ ವಿಜಯ ಅರಸ ಎಂಬುವನಿಗೆ ಶೌರ್ಯದ ಕೊಡುಗೆಯಾಗಿ ಹಲ್ಮಿಡಿ ಮತ್ತು ಮೂಳವಳ್ಳಿಗಳೆಂಬ ಎರಡು ಗ್ರಾಮಗಳನ್ನು ಉಂಬಳಿಯಾಗಿ (ದತ್ತಿ/ದಾನ) ಕೊಡುವ ಬಗ್ಗೆ ಈ ಶಾಸನದಲ್ಲಿ ವಿವರಿಸಲಾಗಿದೆ.