ಶಿಥಿಲದ್ವಿತ್ವ ಸಂಧಿ

ಶಿಥಿಲದ್ವಿತ್ವ ಸಂಧಿ ಎಂದರೇನು?

ಸಂಧಿಯಾಗುವಾಗ, ಪೂರ್ವ ಪದದ ಕೊನೆಯಲ್ಲಿರುವ ಒತ್ತಕ್ಷರವು ಶಿಥಿಲವಾಗುವುದನ್ನು (ಅಂದರೆ ತೇಲಿಸಿ ಉಚ್ಚರಿಸುವುದು) ಶಿಥಿಲದ್ವಿತ್ವ ಸಂಧಿ ಎನ್ನುವರು.

  • ಕೆಲವು ಶಬ್ದಗಳಲ್ಲಿ ಶೈಥಿಲ್ಯವು ಸಹಜವಾಗಿರುತ್ತದೆ. ಉದಾ: ಬರ್ದಿಲಂ, ಗರ್ದುಗು, ಅಮರ್ದು, ಬರ್ದುಂಕು, ಎರ್ದೆ, ಎರ್ದೆವಾಯ್, ಕರ್ದ್ದುಂಕು, ಅಮರ್ದ್ದುವಳ್ಳಿ, ಅದಿರ್ಮ್ಮುತ್ತೆ
  • ದ್ವಿ- ಲಘುಯುಕ್ತವಾದ ರಳ, ಕುಳ, ರೇಫಾಂತ [ಕೆಸ[ರು]+ಗಳ್=ಕೆಸರ್ಗಳ್, ಎಂಬಲ್ಲಿ ಶಬ್ದಾಂತ್ಯದಲ್ಲಿ ‘ರು’ ಇದ್ದರೂ ‘ಗಳ್’ ಸೇರುವಾಗ ಅದಕ್ಕೆ ‘ರ್’ ಆದೇಶವಾಗಿ ಬರುವುದರಿಂದ ಶೈಥಿಲ್ಯವುಂಟಾಗಿದೆ.]

ಈ ಶಬ್ದಗಳಿಗೆ ಗ, , , , ಗಳು ಪರವಾದಾಗ ವಿಕಲ್ಪವಾಗಿ ಶಿಥಿಲತೆ ಬರುತ್ತದೆ.

1. ನಾಮಪದಗಳು (ಬಹುವಚನ ಪತ್ಯಯ -ಗಳ, ಚತುರ್ಥಿವಿಭಕ್ತಿ ಪ್ರತ್ಯಯ -ಗೆ)
ಕೆಸರ್ಗಳ್‌ = ಕೆಸರ್ + ಗಳ್‌ [ಕೆಸರು+ಗಳ್]‌ ರ್‌ ಆದೇಶವಾಗಿದೆ.
‌ಅಗಳ್ಗಳ್‌ = ಅಗಳ್ + ಗಳ್
ಎಸಳ್ಗಳ್‌ = ಎಸಳ್‌ + ಗಳ್‌
ನೆಗಳ್ಗಳ್‌ = ನೆಗಳ್‌ + ಗಳ್‌
ನುಸುಳ್ಗೆ = ನುಸುಳ್ + ಗೆ
ಅಮರ್ಗು = ಅಮರ್ + ಗು
ಕೆಸರ್ಗೆ = ಕೆಸರ್ + ಗೆ

2. ಸಮಾಸ ಪದಗಳು
ಪೊಗರ್ವಚ್ಚೆ = ಪೊಗರು + ಅಚ್ಚೆ
ಕುಳಿರ್ಗಾಳಿ = ಕುಳಿರು + ಗಾಳಿ
ಅಮಳ್ದೊಂಗಳ್ = ಅಮಳು + ದೊಂಗಳ್‌
ಅಲರ್ದೋಟಂ = ಅಲರು + ತೋಟಂ
ಬಿದಿರ್ದಟ್ಟಿ = ಬಿದಿರು + ತಟ್ಟಿ
ಬೆಳರ್ಗೆಂಪು = ಬೆಳರು + ಕೆಂಪು
ಬೆಮರ್ವನಿ = ಬೆಮರ್‌ + ಪನಿ

3. ಕ್ರಿಯಾಪದಗಳಲ್ಲಿ – ಕಾಲವಾಚಕಗಳಾದ ದ, ದಪ, ವ, ಗುಂ, – ವಿದ್ಯರ್ಥದ ‘ಗೆ ಇವು ಪರವಾದಾಗ: ಜಗುಳ್ದಂ, ತೊಡರ್ದಪಂ, ನಿಮಿರ್ವಂ, ಅಮರ್ಗು, ನುಸುಳ್ಗೆ
ಅಗಲ್‌ + ದ = ಅಗಲ್ದ
ಜಗುಳ್‌ + ದಂ = ಜಗುಳ್ದಂ
ತೊಡರ್‌ + ದಂ = ತೊಡರ್ದಪಂ
ನಿಮಿರ್‌ + ವಂ = ನಿಮಿರ್ವಂ
ಅಮರ್‌ + ಗು = ಅಮರ್ಗು
ನುಸುಳ್‌ + ಗೆ = ನುಸುಳ್ಗೆ

ಬಾಸಳ್ಗಳ್ ಎಂಬಲ್ಲಿ ಬಾಸುಳ್ ಎಂಬುದು ‘ರಳಾಂತ’ವಾಗಿದ್ದರೂ ದ್ವಿಲಘುಯುಕ್ತತವಾಗಿರದೆ ಆದ್ಯಕ್ಷರವು ಗುರುವಾಗಿರುವುದರಿಂದ ಅದಕ್ಕೆ ‘ಗಳ್’ ಸೇರಿದಾಗ ಶಿಥಿಲತೆಯುಂಟಾಗುವುದಿಲ್ಲ. ಆದಿ ದೀರ್ಘವಿದ್ದರೂ ಅಪೂರ್ವವಾಗಿ ಕೆಲವೆಡೆಗಳಲ್ಲಿ ಶಿಥಿಲತೆ ಬರುವುದುಂಟು.
ಬಾಸುಳ್ಗಳ್‌ = ಬಾಸುಳ್‌ + ಗಳ್‌
ಇಕ್ಕುಳ್ಗಳ್‌ = ಇಕ್ಕುಳ್‌ + ಗಳ್‌
ಪೊಕ್ಕುಳ್ಗಳ್ = ಪೊಕ್ಕುಳ್‌ + ಗಳ್‌