ವರ್ಣಮಾಲೆ/ಅಕ್ಷರಮಾಲೆ
ಭಾಷೆಯು ಧ್ವನಿಯ ಮೂಲಕ ಪ್ರಾರಂಭವಾಗಿ ಬರಹ (ಲಿಪಿ) ದಿಂದ ವ್ಯಕ್ತವಾಗುತ್ತದೆ. ಹೀಗೆ ಅಕ್ಷರ ಅಥವಾ ಶಬ್ದಗಳು ಮಾತಿನಲ್ಲಿರುವ ಧ್ವನಿಯ ರೂಪವೇ ಆಗಿದೆ.
ಮುಖ್ಯ ಅಂಶಗಳ ಪರಿವಿಡಿ
Toggleಸಾಮಾನ್ಯವಾಗಿ ಮಾತಿನಲ್ಲಿರುವ ಧ್ವನಿಯ ರೂಪದ ಭಾಷೆ ನುಡಿದ ಕೂಡಲೇ ಅಳಿಸಿ ಹೋಗುತ್ತದೆ. ಆದರೆ ಬರಹ ರೂಪದಲ್ಲಿರುವ (ಲಿಪಿ) ಸಂಕೇತಗಳು ಅಳಿಯದೆ ಉಳಿಯುವಂತಹುಗಳು, ಆದ್ದರಿಂದಲೇ ʻಅಕ್ಷರʼ ಎಂದರೆ ನಾಶವಾಗದಿರುವುದು ಎಂದರ್ಥ.
ವರ್ಣ ಎಂದರೇನು?
ಭಾಷೆಯ ಅರ್ಥವತ್ತಾದ ಧ್ವನಿಯ ಬರಹರೂಪವುಳ್ಳ ಸಂಕೇತಗಳು ಮಾತ್ರ ಅಕ್ಷರವೆನಿಸುತ್ತದೆ. ಆದ್ದರಿಂದ ಒಂದು ಭಾಷೆಯ ಅತಿ ಚಿಕ್ಕ ಅಂಶವೆಂದರೆ ʼಅಕ್ಷರ/ವರ್ಣʼ. ಕೇಶಿರಾಜನು ಈ ಅಕ್ಷರಗಳನ್ನು ‘ವರ್ಣ’ ಎಂದು ಶಬ್ದಮಣಿದರ್ಪಣದಲ್ಲಿ ತಿಳಿಸಿದ್ದಾನೆ.
ಅಕ್ಷರ/ವರ್ಣ ಎಂದರೇನು?
ಭಾಷೆಯ ಅರ್ಥವತ್ತಾದ ಧ್ವನಿಯ ಬರಹರೂಪವುಳ್ಳ ಸಂಕೇತಗಳು ಮಾತ್ರ ಅಕ್ಷರವೆನಿಸುತ್ತದೆ. ಆದ್ದರಿಂದ ಒಂದು ಭಾಷೆಯ ಅತಿ ಚಿಕ್ಕ ಅಂಶವೆಂದರೆ ʻಅಕ್ಷರ/ವರ್ಣʼ
ಅತಿಮುಖ್ಯವಾದ ಅಂಶಗಳು
- ಹಳೆಗನ್ನಡ ವರ್ಣಮಾಲೆಯಲ್ಲಿ ಒಟ್ಟು 50 ಅಕ್ಷರಗಳಿದ್ದು, ಆದರೆ ಪ್ರಸ್ತುತ ಹೊಸಗನ್ನಡ ವರ್ಣಮಾಲೆಯಲ್ಲಿ ‘ಋೂ’ ಅಕ್ಷರವನ್ನು ಹೊರತುಪಡಿಸಿ ಒಟ್ಟು 49 ಅಕ್ಷರಗಳಿವೆ.
- ಅದೇ ರೀತಿ ಕೇಶಿರಾಜನ ವ್ಯಾಕರಣ ಗ್ರಂಥವಾದ ಶಬ್ದಮಣಿದರ್ಪಣದಲ್ಲಿ 47 ಅಕ್ಷರಗಳಿವೆ. (ಕೇಶಿರಾಜನು ತನ್ನ ವ್ಯಾಕರಣ ಗ್ರಂಥವಾದ ಶಬ್ದಮಣಿದರ್ಪಣದಲ್ಲಿ 47 ಶುದ್ಧಗೆಗಳ ಸಂಖ್ಯೆ ಎಂದು ತಿಳಿಸಿದ್ದಾನೆ.)
- ಕೆಪಿಎಸ್ಸಿ ಪ್ರಕಾರ ಕನ್ನಡ ವರ್ಣಮಾಲೆಯಲ್ಲಿ ಇರುವ ವರ್ಣಗಳ ಸಂಖ್ಯೆ 49
- ಕನ್ನಡ ಕೈಪಿಡಿಕಾರರಪ್ರಕಾರ ಕನ್ನಡ ವರ್ಣಮಾಲೆಯಲ್ಲಿರುವ ವರ್ಣಗಳ ಸಂಖ್ಯೆ 32
- ಆಧುನಿಕ ಭಾಷಾ ವಿಜ್ಞಾನಿಗಳ ಪ್ರಕಾರ ಕನ್ನಡ ವರ್ಣಮಾಲೆಯಲ್ಲಿ ಇರಬೇಕಾದ ವರ್ಣಗಳ ಸಂಖ್ಯೆ 26
ಕನ್ನಡದಲ್ಲಿ ಇರುವ ಒಟ್ಟು 49 ಅಕ್ಷರಗಳನ್ನು ವರ್ಣಗಳೆಂದು ಹಾಗು ವರ್ಣಗಳ ಕ್ರಮಬದ್ಧವಾದ ಜೋಡಣೆಯನ್ನು “ಅಕ್ಷರಮಾಲೆ/ ವರ್ಣಮಾಲೆ” ಎಂದು ಕರೆಯುತ್ತಾರೆ.
ಕನ್ನಡ ಅಕ್ಷರಗಳನ್ನು ಮುಖ್ಯವಾಗಿ ಮೂರು ವಿಧಗಳಾಗಿ ವಿಂಗಡಿಸಬಹುದು.
I] ಮೂಲಾಕ್ಷರಗಳು (ಅ ಇಂದ ಳ ವರೆಗೆ)
II] ಗುಣಿತಾಕ್ಷರಗಳು (ಕ ಕಾ ಕಿ ಕೀ….)
III] ಸಂಯುಕ್ತಕ್ಷರಗಳು/ಒತ್ತಕ್ಷರಗಳು (ಕ್ಕ, ಮ್ಮ, ವ್ಯ,ಸ್ರ..)
I] ಮೂಲಾಕ್ಷರಗಳು:
ಕನ್ನಡ ವರ್ಣಮಾಲೆಯ ಮೂಲಾಕ್ಷರಗಳನ್ನು ನಾವು ಮತ್ತೆ ಮೂರು ಭಾಗಗಳಾಗಿ ವಿಂಗಡಿಸಬಹುದು.
1) ಸ್ವರಗಳು: ಅ- ಔ (13)
2) ಯೋಗವಾಹಗಳು: ಅಂ, ಅಃ (2)
3) ವ್ಯಂಜನಗಳು: ಕ – ಳ (34)
ಕನ್ನಡ ವರ್ಣಮಾಲೆಯ ಅಕ್ಷರಗಳು
ಸ್ವರಗಳು (13):
ಆ ಇ ಈ ಉ ಊ ಋ ಎ ಏ ಐ ಒ ಓ ಔ
ಯೋಗವಾಹಗಳು (2): ಅಂ (ಅನುಸ್ವಾರ), ಅಃ(ವಿಸರ್ಗ)
ವ್ಯಂಜನಗಳು (34):
ಕ್ ಖ್ ಗ್ ಘ್ ಙ್ ‘ಕ’ ವರ್ಗ 5 ಅಕ್ಷರಗಳು
ಚ್ ಛ್ ಜ್ ಝ್ ಞ್ ‘ಚ’ ವರ್ಗ 5 ಅಕ್ಷರಗಳು
ಟ್ ಠ್ ಡ್ ಢ್ ಣ್ ‘ಟ’ ವರ್ಗ 5 ಅಕ್ಷರಗಳು
ತ್ ಥ್ ದ್ ಧ್ ನ್ ‘ತ’ ವರ್ಗ 5 ಅಕ್ಷರಗಳು
ಪ್ ಫ್ ಬ್ ಭ್ ಮ್ ‘ಪ’ ವರ್ಗ 5 ಅಕ್ಷರಗಳು
ಯ್ ರ್ ಲ್ ವ್ ಶ್ ಷ್ ಸ್ ಹ್ ಳ್
ಯೋಗವಾಹಕ:
ʼಯೋಗʼ ಎಂದರೆ ಸಂಬಂಧವನ್ನು,
ʼವಾಹ್ʼಎಂದರೆ ಹೊಂದಿದ್ದು ಎಂದರ್ಥ. ಅಂದರೆ ಒಂದು ಅಕ್ಷರದೊಂದಿಗೆ ಸಂಬಂಧ ಹೊಂದಿದ ಮೇಲೆಯೇ ಉಚ್ಚಾರ ಮಾಡಲು ಬರುವ ಎಂದರ್ಥ
II] ಕನ್ನಡದ ಗುಣಿತಾಕ್ಷರಗಳು :
ಸ್ವರ ಮತ್ತು ವ್ಯಂಜನಗಳು ಸೇರಿ ಆಗುವ ಅಕ್ಷರಗಳನ್ನು
‘ಗುಣಿತಾಕ್ಷರ’ಗಳೆನ್ನುವರು.
ಹೃಸ್ವ: ಕ (ಕ್+ಅ)
ದೀರ್ಘ: ಕಾ (ಕ್+ಆ’)
ಕ ಕಾ ಕಿ ಕೀ ಕು ಕೂ ಕೃ ಕೆ ಕೇ ಕೈ ಕೊ ಕೋ ಕೌ ಕಂ ಕಃ
III] ಸಂಯುಕ್ತಕ್ಷರಗಳು ಅಥವಾ ಒತ್ತಕ್ಷರಗಳು:
ಕನ್ನಡ ಒತ್ತಕ್ಷರಗಳು (34) ಮೂವತ್ನಾಲ್ಕು ಅವು ಯಾವುವೆಂದರೆ:
ಕ್ಕ ಖ್ಖ ಗ್ಗ ಘ್ಘ ಙ್ಙ
ಚ್ಚ ಛ್ಛ ಜ್ಜ ಝ್ಝ ಞ್ಞ
ಟ್ಟ ಠ್ಠ ಡ್ಡ ಢ್ಢ ಣ್ಣ
ತ್ತ ಥ್ಥ ದ್ದ ಧ್ಧ ನ್ನ
ಪ್ಪ ಫ್ಫ ಬ್ಬ ಭ್ಭ ಮ್ಮ
ಯ್ಯ ರ ಲ್ಲ ವ್ವ ಶ್ಶ ಷ್ಷ ಸ್ಸ ಹ್ಹ ಳ್ಳ
1. ಸಜಾತಿಯ ಸಂಯುಕ್ತಾಕ್ಷರ
ಒಂದೆ ಜಾತಿಯ ಎರಡು ವ್ಯಂಜನಗಳು ಸೇರಿ ಆಗುವ ಅಕ್ಷರಗಳು
ಉದಾ: ಅಮ್ಮಾ, ಅವ್ವಾ, ಅಪ್ಪಾ, ಕನ್ನಡ, ಹಬ್ಬ, ಗಿಡ್ಡಿ, ಅಕ್ಕಾ,
2. ವಿಜಾತಿಯ ಸಂಯುಕ್ತಾಕ್ಷರ
ಬೇರೆ ಬೇರೆ ಜಾತಿಯ ಎರಡು ಅಥವಾ ಎರಡಕ್ಕಿಂತ ಹೆಚ್ಚು ವ್ಯಂಜನಗಳು ಸೇರಿ ಆಗುವ ಅಕ್ಷರಗಳು
ಉದಾ: ಶಕ್ತಿ, ಕಂಠ್ಯ, ವಸ್ತ್ರ, ಸ್ತ್ರೀ, ಶ್ರೀ
ಕನ್ನಡದ ಶುದ್ಧಾಕ್ಷರಗಳ ವಿಧಗಳು | ||
---|---|---|
ಶುದ್ಧಾಕ್ಷರ ವಿಧಗಳು | ಗಣನೆ | ಅಕ್ಷರಗಳು |
ಸ್ವರ | 13 | ಅ ಇಂದ ಔ |
ವರ್ಗೀಯ ವ್ಯಂಜನ | 25 | ಕಚಟತಪ-ವರ್ಗಗಳು |
ಅವರ್ಗೀಯ ವ್ಯಂಜನ | 9 | ಯ-ಳ |
ಯೋಗವಾಹ | 2 | ಅನುಸ್ವಾರ (ಂ), ವಿಸರ್ಗ (ಃ) |
ಹಳಗನ್ನಡ | 2 | ಱ (ರ) ಮತ್ತು ೞ (ಳ) |
ಹೊಸ ಸೇರ್ಪಡೆ (English) | 2 | ಫ಼ ಮತ್ತು ಜ಼ |
| ಈ ಊ |
| ಐ, ಜೌ |
| ಏ |
| ಓ |
| |
ಅಆ, ಇಈ, ಉಊ, ಎಏ, ಒಓ | |
| |
ಆಅ, ಈಇ, ಊಉ, ಏಎ, ಓಒ | |
| |
ಙ್ ಞ್ ಣ್ ನ್ ಮ್ |
🟣ವಿಶಂಕೆ: ಎ ಎಂದರೆ ಸಂದೇಹ/ಅನುಮಾನ – ʻಎʼ ಕಾರಾಂತ ಪದವು ಸಂದೇಹವನ್ನು ಸೂಚಿಸುತ್ತದೆ. ಆದ್ದರಿಂದ ʻಎʼ ಕಾರವನ್ನು ʻವಿಶಂಕೆʼ ಎನ್ನುತ್ತೇವೆ. ಉದಾ: ಅವನೆ, ಇವನೆ, ಅವರೆ, ರಾಮನೆ, ನೀನೆ | |||||||||||
🟣 ಅವಧಾರಣ: ಏ ಎಂದರೆ ನಿರ್ಧಾರ ಎಂದರ್ಥ. ʻಏʼ ಕಾರಾಂತದಿಂದ ಅಂತ್ಯವಾದ ಪದಗಳು ನಿರ್ಧಾರವನ್ನು ಸೂಚಿಸುತ್ತವೆ. ಉದಾ: ಅವನೇ, ಇವನೇ, ಅವರೇ, ರಾಮನೇ, ನೀನೇ | |||||||||||
🟣ನಿಪಾತ ಸ್ವರಗಳು: ಒ, ಓ ದುಃಖ, ಕೋಪ ಮೊದಲಾದವುಗಳನ್ನು ವ್ಯಕ್ತಪಡಿಸುವ ಪದಗಳು ಒ, ಓ ಕಾರದಿಂದ ಅಂತ್ಯವಾಗುವುದೇ ನಿಪಾತ ಸ್ವರ/ಸಂಜ್ಞೆ. ನಿಪಾತಗಳನ್ನು ಅವ್ಯಯಗಳೆಂದೂ, ಪದಗಳೆಂದೂ ತಿಳಿಯಬೇಕು. ಉದಾ: ಅಯ್ಯೋ, ಓಹೋ | |||||||||||
🟣 ಕನ್ನಡದಲ್ಲಿ ಸವರ್ಣಾಕ್ಷರಗಳು (ಅನುಲೋಮ ಸ್ವರಗಳು/ಸಮಾನ ಸವರ್ಣ ಸ್ವರಗಳು) ಅಆ, ಇಈ, ಉಊ, ಎಏ, ಒಓ – ಈ ಅಕ್ಷರಗಳ ಜೋಡಿಗಳನ್ನು ಸವರ್ಣ/ ಸಮಾನ ಅಕ್ಷರಗಳೆಂದು ಕರೆಯುತ್ತೇವೆ.) | |||||||||||
🟣 ಕನ್ನಡದ ವಿಲೋಮ ಸವರ್ಣ ಸ್ವರಗಳು ಆಅ, ಈಇ, ಊಉ, ಏಎ, ಓಒ | |||||||||||
🟣 ಶಿಥಿಲ ದ್ವಿತ್ವ ಎಂದರೆ ಒತ್ತಿ ಉಚ್ಚರಿಸದೆ ತೇಲಿಸಿ ಉಚ್ಚರಿಸುವ ಒತ್ತಕ್ಷರ. ಛಂದಸ್ಸಿನಲ್ಲಿ ಒತ್ತಕ್ಷರದ ಹಿಂದಿನ ಅಕ್ಷರವು ಗುರುವಾಗುತ್ತದೆ. ಆದರೆ ಆ ಒತ್ತಕ್ಷರವು ಶಿಥಿಲ ದ್ವಿತ್ವವಾಗಿದ್ದರೆ ಅದು ಗುರುವಾಗುವುದಿಲ್ಲ – ಲಘುವಾಗಿಯೇ ಉಳಿಯುತ್ತದೆ. | |||||||||||
ಉದಾ: ಕುಳಿರ್ಗಾಳಿ, ಪೊಗರ್ವಚ್ಚೆ, ಅಮರ್ದು, ಕೆಸರ್ಗಳ್ | |||||||||||
🟣 ಕನ್ನಡದಲ್ಲಿರುವ ಸಂಧ್ಯಕ್ಷರಗಳು ಐ (ಅಯ್), ಔ (ಅವ್) | 2 | ||||||||||
🟣 ಸಂಸ್ಕೃತದಲ್ಲಿರುವ ಸಂಧ್ಯಕ್ಷರಗಳು (ಏ, ಐ, ಓ, ಔ) | 4 | ||||||||||
🟣 ಕಾರ ಮತ್ತು ವರ್ಣ: (ಅಕಾರ – ಅವರ್ಣ) ಅಕಾರವೆಂದರೆ ʻಅʼ ಎಂಬ ಅಕ್ಷರ. ಅವರ್ಣ ಎಂದರೆ ಸಜಾತೀಯ ಹ್ರಸ್ವ ದೀರ್ಘಾದಿ ಸಕಲ ಅಂಶಗಳಿಂದ ಕೂಡಿದ ಅಕ್ಷರಗಳೆಂದು ತಿಳಿಯಬೇಕು. | |||||||||||
🟣 ಹೊಸಗನ್ನಡ ಅಕ್ಷರಗಳ ಹೊಸಗನ್ನಡ ರೂಪ ರ – ಳ-ನ ಗಳನ್ನು ಹಳಗನ್ನಡದಲ್ಲಿ ಱ (ರ), ೞ (ಳ) (ನ್) ಎಂದು ಕರೆಯುತ್ತಾರೆ. | |||||||||||
🟣 ನಾಮಿಗಳು ಎಂದರೇನು? ಅ, ಆ ವರ್ಣಗಳನ್ನು ಬಿಟ್ಟು ಉಳಿದ ಸ್ವರಗಳನ್ನು ʼನಾಮಿʼ ಎಂದು ಕರೆಯುತ್ತೇವೆ. ಅವರ್ಣವು (ಅ ಆ) ಸಹಜವಾದದು ಆದ್ದರಿಂದ ಅದು ನಾಮಿ ಅಲ್ಲ. ನಾಮಿಗಳು: ಇ,ಈ ಉಊ ಎಏ, ಒಓ ಅವರ್ಣ: ಅಆ | |||||||||||
🟣 ಗುಣವೃದ್ಧಿಗಳು ಅವರ್ಣವನ್ನು ಹೊರತುಪಡಿಸಿ ಉಳಿದ ನಾಮಿಗಳು ಅವರ್ಣ ಯೋಗದಿಂದ ಗುಣವೃದ್ಧಿಯನ್ನು ಪಡೆದುಕೊಳ್ಳುತ್ತವೆ ಆದ್ದರಿಂದ ಈ ಅಕ್ಷರಗಳನ್ನು ಗುಣವೃದ್ಧಿಗಳು ಅಥವಾ ಗುಣವೃದ್ಧಿದಾಮರ್ ಎಂದು ಕರೆಯುತ್ತಾರೆ.
| |||||||||||
🟣 ಸ್ವರಾಂಗ & ವ್ಯಂಜನಾಂಗ ಎಂದರೇನು? ಅನುಸ್ವಾರ ಮತ್ತು ವಿಸರ್ಗಗಳು ಸ್ವರಗಳಲ್ಲಿಯೇ ಸೇರಿದ್ದರೂ ಸ್ವರದೊಡನೆ ಉಚ್ಚಾರಗೊಳ್ಳುವ ಅನುಸ್ವಾರವನ್ನು ಸ್ವರಾಂಗವೆಂದೂ, ವ್ಯಂಜನದೊಢನೆ ಉಚ್ಚಾರಗೊಳ್ಳುವ ವಿಸರ್ಗವನ್ನು ವ್ವಂಜನಾಂಗವೆಂದೂ ಕರೆಯಲಾಗಿದೆ. (ಅಂ-ಅನುಸ್ವಾರ, ಅಃ ವಿಸರ್ಗ) | |||||||||||
🟣 ಕೇಶಿರಾಜನ ಪ್ರಕಾರ 5 ದೇಶಿಯ ಅಕ್ಷರಗಳೆಂದರೆ ಎ, ಓ, ಱ, ೞ ಕುಳ / ಎ, ಓ, ಱ, ೞ, ಳ್ | |||||||||||
🟣 ಹಳಗನ್ನಡದಲ್ಲಿ 4 ಯೋಗವಾಹಗಳಿವೆ. 1. ಅನುಸ್ವಾರ (ಅಂ) 2. ವಿಸರ್ಗ (ಅಃ) 3. ಉಪಾಧ್ಮಾನೀಯ 00 : ಎಂದರೆ ಕಡಿಮೆ ಜೋರಿನಿಂದ ಊದುವುದರಿಂದ ಉಂಟಾಗುವ ಧ್ವನಿ ಎಂದರ್ಥ 4. ಜಿಹ್ವಾಮೂಲೀಯ (‘ೱ’) : ಎಂದರೆ ನಾಲಿಗೆಯ ಬುಡದಿಂದ ಹೊರಡುವ ಧ್ವನಿ ಎಂದರ್ಥ (ಉಪಾಧ್ಮಾನೀಯ ಮತ್ತು ಜಿಹ್ವಾಮೂಲೀಯ ಕೇವಲ ಸಂಸ್ಕೃತದಲ್ಲಿ ಮಾತ್ರ ಬಳಕೆಯಲ್ಲಿವೆ.) | |||||||||||
🟣 ಕೇಶಿರಾಜನ ಪ್ರಕಾರ ಕನ್ನಡ ಶುದ್ಧಗೆಯಲ್ಲಿ ಐದು ವಿಧಗಳು. ಅವುಗಳು ಕ್ರಮವಾಗಿ: 1. ಸ್ವರಗಳು 2. ವರ್ಗೀಯ ವ್ಯಂಜನಗಳು 3. ಅವರ್ಗೀಯ ವ್ಯಂಜನಗಳು 4. ಯೋಗವಾಹಗಳು 5. ದೇಶಿಯ ಅಕ್ಷರಗಳು | |||||||||||
🟪 ಅಕ್ಷರ ಪದನಿಷ್ಪತ್ತಿ ಕ್ಷರ ಎಂದರೆ ಕ್ಷಯವಾಗು, ನಾಶವಾಗು, ಕ್ಷಯಿಸು, ಮುಗಿಯು ಎಂದರ್ಥ. ಅ+ಕ್ಷರ ಎಂದಾಗ ನಾಶವಾಗದ, ಕ್ಷಯಿಸಲಾಗದ ಎಂಬ ಅರ್ಥವನ್ನು ಪಡೆದುಕೊಳ್ಳುತ್ತದೆ. | |||||||||||
| |||||||||||
🟪 ಕೇಶಿರಾಜ ಹೇಳಿರುವ ೯ ಅಸಾಧಾರಣ ಲಕ್ಷಣಗಳು
| |||||||||||
🟪 ಘೋಷ ವರ್ಣಗಳು (ಮೃದು ವರ್ಣಗಳು) ಗಂಟಲಿನ ವರ್ಣನಾಳಗಳಿಗೆ ಸ್ಪರ್ಶಿಸಿ ಹೊರಬರುವ ಅಕ್ಷರಗಳನ್ನು ಘೋಷ ವರ್ಣಗಳು ಎನ್ನುತ್ತಾರೆ. ಉದಾ: ಗ, ಜ, ಡ, ದ, ಬ, ಘ, ಝ, ಢ, ಧ, ಭ, ಙ, ಞ, ಣ, ನ, ಮ, ಯ, ರ, ಲ, ವ, ಹ | |||||||||||
🟪 ಅಘೋಷ ವರ್ಣಗಳು (ಕರ್ಕಶ ವರ್ಣಗಳು) ಗಂಟಲಿನ ವರ್ಣನಾಳಗಳಿಗೆ ಸ್ಪರ್ಶಿಸದೆ ಹೊರಬರುವ ಅಕ್ಷರಗಳನ್ನು ಅಘೋಷ ವರ್ಣಗಳು ಎನ್ನುತ್ತಾರೆ. ಉದಾ: ಕ, ಚ, ಟ, ತ, ಪ, ಖ, ಛ, ಠ, ಥ, ಫ, ಶ, ಷ, ಸ, ಳ | |||||||||||
🟪 ಈಷತ್ ವರ್ಣಗಳು: ಘೋಷ & ಅಘೋಷ ಎರಡೂ ವರ್ಣಗಳ ಗುಣಲಕ್ಷಣಗಳನ್ನು ಹೊಂದಿರುವ ಅಕ್ಷರಗಳು ಉದಾ: ಚ, ಜ | |||||||||||
🟪 ಅಂತಸ್ಥ ವರ್ಣಗಳು: ವ್ಯಂಜನವೂ ಸ್ವರವೂ ಆಗಬಹುದಾದ ಲಕ್ಷಣಗಳನ್ನು ಹೊಂದಿರುವ ಅಕ್ಷರಗಳು. ಉದಾ: ಯ, ರ, ಲ, ವ, ಳ | |||||||||||
🟪 ಊಷ್ಮ ವರ್ಣಗಳು: ಊಷ್ಮ ಎಂದರೆ ಉಷ್ಣ, ಕಾವು ಎಂದರ್ಥ. ಬಿಸಿಗಾಳಿಯೊಂದಿಗೆ ಕಿರುನಾಲಿಗೆ ಮತ್ತು ನಾಲಿಗೆಯಿಂದ ಶಿಳ್ಳೆ/ಉಷ್ ಶಬ್ದದೊಂದಿಗೆ ಹೊರಬರುವ ಅಕ್ಷರಗಳು. ಉದಾ: ಶ, ಷ, ಸ | |||||||||||
🟪 ತಾಲವ್ಯೀಕರಣ: ʻಚʼ ವರ್ಣವು ʻಕʼ ವರ್ಣವಾಗಿ ಬದಲಾಗುವುದಕ್ಕೆ ತಾಲವ್ಯೀಕರಣ ಎಂದು ಭಾಷಾವಿಜ್ಞಾನಿಗಳು ಕರೆಯುತ್ತಾರೆ. ಉದಾ: ಚೆಂಬೋತ – ಕೆಂಬೋತ (ಕೆಂಬೂತ) ಕೆಂಗುಲಾಬಿ – ಚೆಂಗುಲಾಬಿ, ಕೆಂದುಟಿ – ಚೆಂದುಟಿ |
ಕನ್ನಡದಲ್ಲಿರುವ ಸಂಧ್ಯಕ್ಷರಗಳು-2 |
ಸಂಸ್ಕೃತದಲ್ಲಿರುವ ಸಂಧ್ಯಕ್ಷರಗಳು-4 |
ಕನ್ನಡ ಅಕ್ಷರಗಳ ಉಚ್ಚಾರಣಾ ಸ್ಥಾನಗಳು / ಕನ್ನಡ ವರ್ಣೋತ್ಪತ್ತಿಸ್ಥಾನಗಳು | ||||
---|---|---|---|---|
ವರ್ಣಸ್ಥಾನ | ಅರ್ಥ | ಅಕ್ಷರಗಳು | ||
೧. ಕಂಠ್ಯವರ್ಣ | ಗಂಟಲಿನಿಂದ ಹುಟ್ಟುವ ಅಕ್ಷರಗಳಿಗೆ ಕಂಠ್ಯವರ್ಣ | ಅ ಆ | ಕ ಖ ಗ ಘ ಙ | ಹ ವಿಸರ್ಗ(ಃ) |
೨. ತಾಲು/ತಾಲವ್ಯ | ದವಡೆ(ತಾಲು) ಯಿಂದ ಹುಟ್ಟುವ ಅಕ್ಷರಗಳೆ ತಾಲವ್ಯಾಕ್ಷರಗಳು | ಇ ಈ | ಚ ಛ ಜ ಝ ಞ | ಯ ಶ |
೩. ಮೂರ್ಧನ್ಯ | ನಾಲಿಗೆಯ ಮೇಲ್ಬಾಗ ಮತ್ತು ಮೂಗಿನ ಕೆಳಭಾಗದ ಸಹಾಯದಿಂದ ಹುಟ್ಟುವ ಅಕ್ಷರಗಳು. | ಋ | ಟ ಠ ಡ ಢ ಣ | ರ ಷ ಳ |
೪. ದಂತ್ಯವರ್ಣ | ಹಲ್ಲುಗಳ ಸಹಾಯದಿಂದ ಹುಟ್ಟುವ ಅಕ್ಷರಗಳು | ತ ಥ ದ ಧ ನ | ಸ ಲ | |
೫. ಓಷ್ಠವರ್ಣ | ತುಟಿಯ ಸಹಾಯದಿಂದ ಹುಟ್ಟುವ ಅಕ್ಷರಗಳು | ಉ ಊ | ಪ ಫ ಬ ಭ ಮ | ಅಂ (ಅನುಸ್ವಾರ) |
6. ದಂತೌಷ್ಠ್ಯ | ಹಲ್ಲು ಮತ್ತು ತುಟಿಯ ಸಹಾಯದಿಂದ ಹುಟ್ಟುವ ಅಕ್ಷರಗಳು | ವ | ||
೭. ಕಂಠತಾಲು | ಕಂಠ ಮತ್ತು ದವಡೆಯ ಸಹಾಯದಿಂದ ಹುಟ್ಟುವ ಅಕ್ಷರಗಳು | ಎ ಏ ಐ | ||
೮. ಕಂಠೋಷ್ಠ್ಯ | ಕಂಠ ಮತ್ತು ತುಟಿಯ ಸಹಾಯದಿಂದ ಹುಟ್ಟುವ ಅಕ್ಷರಗಳು | ಒ ಓ ಔ | ||
೯. ನಾಸಿಕವರ್ಣ | ಮೂಗಿನ ಸಹಾಯದಿಂದ ಹುಟ್ಟುವ ಅಕ್ಷರಗಳು | ಙ, ಞ ಣ ನ ಮ |